ಶಿಕ್ಷಣಾಧಿಕಾರಿಗಳು ಮಿತ್ತಡ್ಕ ಶಾಲೆಯಲ್ಲಿ ಕಾನೂನು ಪಾಲನೆ ಬಿಟ್ಟು ಸಭೆ ನಡೆಸಿ, ಗೊಂದಲ ಸೃಷ್ಠಿ

0

ನಾವು ಮಕ್ಕಳನ್ನು ಶಾಲೆಯಿಂದ ಬಿಡಿಸುತ್ತೇವೆ, ಹೀಗೇ ಮುಂದುವರಿದರೆ ಕಾನೂನು ಹೋರಾಟ ನಡೆಸುತ್ತೇವೆ : ಮಿತ್ತಡ್ಕ ಶಾಲಾ ಪೋಷಕರಿಂದ ಪತ್ರಿಕಾಗೋಷ್ಠಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕ ಮರ್ಕಂಜದಲ್ಲಿ ಇದ್ದ ಎಸ್ ಡಿಎಂಸಿಯೊಳಗಿನ ಮತ್ತು ಮತ್ತು ಶಾಲಾ ಮುಖ್ಯೋಪಾಧ್ಯಾಯರ ಮಧ್ಯೆ ಇದ್ದ ವಿವಾದವನ್ನು ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಲೆಗೆ ತೆರಳಿ, ಎಸ್ ಡಿಎಂಸಿ, ಪೋಷಕರು, ಹಳೆವಿದ್ಯಾರ್ಥಿಗಳು, ಗ್ರಾಮ ಪಂಚಾಯತ್ ನವರ ಉಪಸ್ಥಿತಿಯಲ್ಲಿ ಬಗೆಹರಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿ ಸಭೆ ನಡೆಸಿ ಮತ್ತೆ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದಾರೆ ಎಂದು ಪೋಷಕರು ಇಂದು ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದಾರೆ.

ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪೋಷಕರಾದ ಜಗನ್ನಾಥ ಮಿತ್ತಡ್ಕ ಎಂಬವರು ’ಮಿತ್ತಡ್ಕ ಶಾಲೆಯ ಸಮಸ್ಯೆ ಮತ್ತು ಗೊಂದಲದ ಕುರಿತು ಕ್ಷೇತ್ರ ಶಿಕ್ಷಾಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರುಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಸ್ ಡಿಎಂಸಿ ಕಾನೂನಿನ ಅಧಿನಿಯಮದ ಪ್ರಕಾರ ಕಾನೂನು ಪಾಲನೆ ಬಿಟ್ಟು ಸಭೆ ನಡೆಸಿರುವುದು ಕಾನೂನು ಉಲ್ಲಂಘನೆ ಮಾಡಿರುತ್ತದೆ. ಈ ಎಲ್ಲಾ ಕಾರಣ ಗೊಂದಲಕ್ಕೆ ಮತ್ತೆ ಎಡೆಮಾಡಿಕೊಟ್ಟಿದೆ ಎಂದು ಅವರು ಆರೋಪಿಸಿದರು.

ಶಾಲಾ ಶೈಕ್ಷಣಿಕ ವಿಚಾರದಲ್ಲಿ ಎಸ್ ಡಿ ಎಂಸಿ ಮತ್ತು ಪೋಷಕರ ಸಭೆಯ ಸಮ್ಮುಖದಲ್ಲಿ ಸರಕಾರದ ಕಾನೂನಿನ ಅಡಿಯಲ್ಲಿ ಶಿಕ್ಷಣಾಧಿಕಾರಿಗಳು ಸಮಸ್ಯೆ ಇತ್ಯಾರ್ಥ ಮಾಡಬೇಕಿತ್ತು. ಆದರೆ ಸಭೆಯಲ್ಲಿ ಪೋಷಕರ ಪ್ರತಿನಿಧಿಗಳು ಮತ್ತು ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಜಂಟಿಯಾಗಿ ಇದ್ದು, ಶಾಲಾ ಸಮಸ್ಯೆಗಳ ಬಗ್ಗೆ ಪೋಷಕ ಪ್ರತಿನಿಧಿಗಳನ್ನು ಬಿಟ್ಟು ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿದ್ದು ಸರಿಯೆ? ಹಳೆ ವಿದ್ಯಾರ್ಥಿ ಗಳ ಮಕ್ಕಳು ಶಾಲೆಗೆ ಬರುತ್ತಿಲ್ಲ ಎಂದು ಹೇಳಿದ ಅವರು ನ್ಯೂನತೆ ಕಂಡು ಬಂದರೆ ಪ್ರತಿಭಟಿಸುವ ಹಕ್ಕು ಪೋಷಕರಿಗೆ ಇಲ್ಲಎಂದು ಶಿಕ್ಷಣಾಧಿಕಾರಿಗಳು ಹೇಳುವುದು ಸರಿಯಲ್ಲ. ಅವರು ನಮ್ಮೊಂದಿಗೆ ಉದ್ದಟತನದಿಂದ ವರ್ತಿಸಿದ್ದಾರೆ. ಈಗಾಗಲೇ ಮುಖ್ಯ ಶಿಕ್ಷಕರ ವಿರುದ್ಧ ದಾಖಾಲು ಸಮೇತ ದೂರನ್ನು ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರಿಗೆ, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯದರ್ಶಿಗೆ, ತಹಶೀಲ್ದಾರರಿಗೆ ಸಲ್ಲಿಸಿದ್ದರೂ, ಅವರು ಶಿಕ್ಷಕರನ್ನು ರಕ್ಷಿಸಿವ ಎಜೆಸ್ಟ್ ಮೆಂಟ್ ಕಾನೂನನ್ನು ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಮಾಡಿದೆ. ಆದರಿಂದ ಮುಖ್ಯ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳದೇ ಇರುವುದರಿಂದ ನಮ್ಮ ಮಕ್ಕಳನ್ನು ಮಿತ್ತಡ್ಕ ಶಾಲೆಗೆ ಸೇರಿಸಿಕೊಳ್ಳುವುದಿಲ್ಲ, ನಾವು ಮಕ್ಕಳನ್ನು ಶಾಲೆಯಿಂದ ಬಿಡಿಸುತ್ತೇವೆ, ಹೀಗೇ ಮುಂದುವರಿದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮತ್ತು ಎಸ್ ಡಿ ಎಂಸಿ ಮಾಜಿ ಅಧ್ಯಕ್ಷ ಗೋವಿಂದರಾಜ್ ಬಳ್ಳಕ್ಕಾನ ಮತ್ತು ಸದಸ್ಯ ಹೇಮಕುಮಾರ್ ರವರು ಶಾಲೆಗೆ ದಾನಿಗಳಿಂದ ಸಂಗ್ರಹಿಸಿ ನೀಡಿದ, ನೀಡಲಿದ್ದ ಮತ್ತು ಸ್ವತಃ ನೀಡಿದ ಕೊಡುಗೆಗಳ ಬಗ್ಗೆ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ ಡಿಎಂಸಿ ಮಾಜಿ ಅಧ್ಯಕ್ಷೆ ಸಂಧ್ಯಾ ದೋಳ, ಗಂಗಾಧರ ದೋಳ ಉಪಸ್ಥಿತರಿದ್ದರು.