ಜೂನ್ 16ರಿಂದ ಅಜ್ಜಾವರ ಮೇನಾಲ ಉರೂಸ್

0

ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ದರ್ಗಾ ಶರೀಫ್ ಉರೂಸ್ ಹಾಗೂ ಧಾರ್ಮಿಕ ಕಾರ್ಯಕ್ರಮವು ಜೂ.16 ರಿಂದ ಆರಂಭಗೊಂಡು ಜೂ.20 ಕ್ಕೆ ಸಮಾರೋಪಗೋಳ್ಳಲಿದೆ.

ಕಳೆದ ಮೇ ತಿಂಗಳಲ್ಲಿ ನಡೆಯಬೇಕಿದ್ದ ಊರೂಸ್ ಕಾರ್ಯಕ್ರಮವು ಕರ್ನಾಟಕ ರಾಜ್ಯದ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಉರೂಸ್ ಕಾರ್ಯಕ್ರಮವನ್ನು ದ.ಕ ಜಿಲ್ಲಾಧಿಕಾರಿ ಗಳ ಅದೇಶ‌ ಮೇರೆಗೆ ಮುಂದೂಡಲಾಗಿತ್ತು.

ಇದೀಗ ಚುನಾವಣೆ ನೀತಿ ಸಹಿಂತೆ ತೆರವಾದ ಕಾರಣ ಅಜ್ಜಾವರ ಮೇನಾಲ ದರ್ಗಾ ಶರೀಫ್ ಉರೂಸ್ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಜೂ 16ರಿಂದ ಜೂನ್ 20 ರವರೆಗೆ ನಡೆಸಲು ದ.ಕ.ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಅಜ್ಜಾವರ ಮುಹ್ಯದ್ದೀನ್ ಜುಮ್ಮಾ ಮಸೀದಿ ಅಡಳಿತ ಮಂಡಳಿ ತಿಳಿಸಿದ್ದಾರೆ