ಸುಳ್ಯದಲ್ಲಿ ಯಕ್ಷಗಾನ ನಾಟ್ಯ ತರಬೇತಿ ಪುನರಾರಂಭ

0


ಶ್ರೀ ಭುವನೇಶ್ವರೀ ಯಕ್ಷಗಾನ ಕಲಾ ಮಂಡಳಿ, ಸುಳ್ಯ ಇದರ 42 ನೇ ವರ್ಷದ ನಾಟ್ಯ ತರಬೇತಿ ಶ್ರೀ ಚೆನ್ನಕೇಶವ ದೇವಳದಲ್ಲಿ ನಡೆಯಿತು. ಸುಳ್ಯದ ಪಶು ವೈದ್ಯರಾದ ಡಾ. ನಿತಿನ್ ಪ್ರಭು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀಮತಿ ಸುಪ್ರೀತ, ಶ್ರೀಕುಮರ್, ಶ್ರೀಮತಿ ಜಯಶ್ರೀ ತಮ್ಮ ಅನುಭವ ಹಂಚಿಕೊಂಡರು. ಯಕ್ಷಗುರು ಕೋಡ್ಲ ಗಣಪತಿ ಭಟ್ ಸ್ವಾಗತಿಸಿ, ವಂದನಾರ್ಪಣೆಗೈದರು. . ಲೋಹಿತ್ ಡಿ.ಯಂ. ಪ್ರಾರ್ಥಿಸಿದರು.
ಪ್ರತಿ ಭಾನುವಾರ ಶ್ರೀ ಚೆನ್ನಕೇಶವ ದೇವಳದ ರಾಜಗೋಪುರದಲ್ಲಿ ಬೆಳ್ಳಿಗ್ಗೆ 9.3೦ಕ್ಕೆ ನಾಟ್ಯ ತರಬೇತಿ ನಡೆಯಲಿದೆ.