ಪಂಜ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಘಟನೆ
ಪಂಜದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಗೆ ಸರಬರಾಜು ಆದ ಗ್ಯಾಸ್ ಹಂಡೆಯಲ್ಲಿ ಗ್ಯಾಸ್ ನ ಬದಲು ನೀರು ತುಂಬಿದ್ದ ಘಟನೆ ವರದಿಯಾಗಿದೆ.















ಇತ್ತೀಚೆಗೆ ಶಾಲೆಗೆ ಸರಬರಾಜು ಆದ ಗ್ಯಾಸ್ ಹಂಡೆಯನ್ನು ಸ್ಟವ್ ಗೆ ಸಿಕ್ಕಿಸಿ ಬರ್ನರ್ ಉರಿಸಿದಾಗ ಸ್ವಲ್ಪ ಹೊತ್ತು ಉರಿದು, ಸ್ಟವ್ ಉರಿಯುವುದು ನಿಲ್ಲಿಸಿತು. ಗ್ಯಾಸ್ ಹಂಡೆ ಪರಿಶೀಲಿಸಿದಾಗ ನೀರು ತುಂಬಿರುವುದು ಗೊತ್ತಾಗಿದೆ. ಹಂಡೆಯನ್ನು ತಲೆ ಕೆಳಗೆ ಮಾಡಿ ನಾಬ್ ನ್ನು ಅದುಮಿದಾಗ ಲೀಟರ್ ಗಟ್ಟಲೆ ನೀರು ಹೊರಬರುತ್ತಿತ್ತು. ಬಳಿಕ ಗ್ಯಾಸ್ ಏಜೆನ್ಸಿ ಯವರಿಗೆ ಮಾಹಿತಿ ನೀಡಲಾಗಿದ್ದು, ಅವರು ಬಂದು ಬದಲಿ ಗ್ಯಾಸ್ ಹಂಡೆ ನೀಡಿ, ನೀರಿದ್ದ ಹಂಡೆ ತೆಗೆದುಕೊಂಡು ಹೋದರೆನ್ನಲಾಗಿದೆ.
ಆದರೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವವರು ಯಾರು ಎಂದು ತಿಳಿಯದಾಗಿದೆ.









