ನೆಟ್ಟಾರು : ಯುವಕ ನೇಣು ಬಿಗಿದು ಆತ್ಮಹತ್ಯೆ

0

ಬೆಳ್ಳಾರೆ ಗ್ರಾಮದ ನೆಟ್ಟಾರಿನಲ್ಲಿ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.


ನೆಟ್ಟಾರಿನ ಸುತ್ತುಕೋಟೆ ಸೀತಾರಾಮ ನಾಯ್ಕ (33) ಎಂಬವರು ಮನೆ ಸಮೀಪದ ಗೇರುಮರಕ್ಕೆ ಬೈರಾಸಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಜೂ.22 ರಂದು ಪತ್ತೆಯಾಗಿದೆ.


ಜೂ.21 ರಂದು ಬೆಳಿಗ್ಗೆ ಮನೆಯಿಂದ ಬೆಳ್ಳಾರೆ ಪೇಟೆಗೆ ಹೋಗಿ ಮನೆಗೆ ಬಂದವರು ಬಳಿಕ ಮದ್ಯಾಹ್ನ ನಂತರ ಮನೆಯಿಂದ ಕಾಣೆಯಾಗಿದ್ದರು.
ನಿನ್ನೆಯಿಂದ ಮನೆಯವರು ಹುಡುಕಾಡಿ ಇಂದು ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.