ಯುವಜನ ಸಂಯುಕ್ತ ಮಂಡಳಿಯಲ್ಲಿ ಯೋಗ ದಿನಾಚರಣೆ

0

ತಾಲೂಕು ಪಂಚಾಯತ್ ಸುಳ್ಯ,ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ ಯುವಜನ ಸೇವಾ ಸಂಸ್ಥೆ ಇವರುಗಳ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಯುವಜನ ಸಂಯುಕ್ತ ಮಂಡಳಿಯ ಸಭಾಭವನದಲ್ಲಿ ನಡೆಯಿತು.


ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ತೇಜಸ್ವಿ ಕಡಪಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಯೋಗಪಟು ಸಂತೋಷ್ ಮುಂಡಕಜೆ ಯೋಗ ಪ್ರಾತ್ಯಕ್ಷಿಕೆ ಯನ್ನು ನಡೆಸಿಕೊಟ್ಟರು.
ಯೋಗಾಭ್ಯಾಸದ ಮಹತ್ವ ಮತ್ತು ಉಪಯೋಗಗಳ ಬಗ್ಗೆ ಸಂತೋಷ್ ಮುಂಡಕಜೆ ತಿಳಿಸಿದರು.


ಯುವಜನ ಸಂಯುಕ್ತ ಮಂಡಳಿಯ ಪದಾಧಿಕಾರಿಗಳು ಹಾಗೂ ಸುಳ್ಯ ತಾಲೂಕು ಪಂಚಾಯತ್ ನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.