ಬೆಳ್ಳಾರೆ : ಶರತ್ ಜೋಶಿಯವರ ವೈಕುಂಠ ಸಮಾರಾಧನೆ, ಗಣ್ಯರಿಂದ ಪುಷ್ಪನಮನ

0

ಬೆಳ್ಳಾರೆಯ ಉದ್ಯಮಿ, ಪ್ರಸಾದ್ ಹಾರ್ಡ್ ವೇರ್ಸ್ ಮಾಲಕ ಸುಬ್ರಹ್ಮಣ್ಯ ಜೋಶಿಯವರ ಪುತ್ರ ಶರತ್ ಜೋಶಿಯವರ ವೈಕುಂಠ ಸಮಾರಾಧನೆ ಇಂದು ಮೃತರ ಸ್ವಗೃಹ ಶ್ರೀಮಾತಾದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಜೋಶಿ ಸಹೋದರರಾದ ಪ್ರಸಾದ್ ಫ್ಯೂಯೆಲ್ಸ್ ಮಾಲಕ ಬಿ. ಜಯಪ್ರಸಾದ್ ಜೋಶಿ, ಪ್ರಸಾದ್ ಟೆಕ್ಸ್ಟ್ ಟೈಲ್ಸ್ ಮಾಲಕರಾದ ಬಿ. ನರಸಿಂಹ ಜೋಶಿ, ಮೃತರ ತಂದೆ ಬಿ. ಸುಬ್ರಹ್ಮಣ್ಯ ಜೋಶಿ, ತಾಯಿ ಶ್ಯಾಮಲ ಎಸ್. ಜೋಶಿ, ಪುತ್ರಿ ಡಾ. ಶರಣ್ಯ ಅಖಿಲೇಶ್, ಅಳಿಯ ಅಖಿಲೇಶ್ ಪಾಲಾರ್,ಜೋಶಿಯವರ ಮಿತ್ರರಾದ ಪ್ರದೀಪ್ ಕುಮಾರ್ ರೈ ಪನ್ನೆ, ನವೀನ್ ಶಂಕರ್ ರೈ ಪನ್ನೆ, ಸಿ.ಎ. ಆರ್.ಡಿ. ಶಾಸ್ತ್ರಿ, ಪ್ರಸನ್ನ ಕಲ್ಲಾಜೆ, ಶ್ರೀಮತಿ ಸುಜಾತ ಕಲ್ಲಾಜೆ, ಬಿ.ಕೆ.ಶ್ರೀಧರ್ ಗುತ್ತಿಗಾರು ಸೇರಿದಂತೆ ಜೋಶಿ ಕುಟುಂಬದ ನೂರಾರು ಮಂದಿ ಬಂಧುಗಳು, ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು, ಜೋಶಿ ಕುಟುಂಬದ ಸದಸ್ಯರು, ಬಂಧುಗಳು ಶರತ್ ಜೋಶಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.