ಚೆಂಬು : ಊರುಬೈಲು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

0

ಚೆಂಬು ಗ್ರಾಮದ ಊರುಬೈಲು ಸ.ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳನ್ನು ಜೂ.12ರಂದು ವಿತರಿಸಲಾಯಿತು.

ಕಳೆದ ಎರಡು ಶೈಕ್ಷಣಿಕ ವರ್ಷಗಳಿಂದ ವಿದ್ಯಾಭಿಮಾನಿಯಾದ ಕೆ. ಆರ್ ಯತೀಶ ಕುಂದಲ್ಪಾಡಿ ಅವರು ಉಚಿತವಾಗಿ ಕಲಿಕಾ ಸಾಮಾಗ್ರಿಗಳನ್ನು ಒದಗಿಸುತ್ತಾ ಬರುತ್ತಿದ್ದು, ಈ ಶೈಕ್ಷಣಿಕ ವರ್ಷವೂ ಒದಗಿಸಿದ್ದಾರೆ.
ಇವರ ಮೂರು ಮಂದಿ ಪುತ್ರಿಯರು ಇದೇ ಶಾಲೆಯಲ್ಲಿ ಓದಿ ಉನ್ನತ ವ್ಯಾಸಂಗದಲ್ಲಿ ಸಾಧನೆ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಯತೀಶ್ ಅವರ ಸಹೋದರ ಮನುಕುಮಾರ ಕುಂದಲ್ಪಾಡಿ ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕರು, ಸಹಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.