ಜೂ.30 : ದೇವಚಳ್ಳ ಸ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶಶಿಕಲಾ ಪಿ. ಬೊಳ್ಳೂರು ನಿವೃತ್ತಿ

0

ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಶಶಿಕಲಾ ಪಿ. ಬೊಳ್ಳೂರು ರವರು 29 ವರ್ಷಗಳ ಸುದೀರ್ಘ ಸೇವೆಯಿಂದ ಜೂ.30 ರಂದು ನಿವೃತ್ತಿ ಹೊಂದಲಿದ್ದಾರೆ.


ಇವರು
ಕಂದ್ರಪ್ಪಾಡಿ ಗ್ರಾಮದ ಪಡ್ಪು ದಿ.ಆನಂದ ಗೌಡ ಮತ್ತು ಶ್ರೀಮತಿ ನಾಗಮ್ಮ ದಂಪತಿಯ ಪುತ್ರಿ. ತನ್ನ ಪ್ರಾಥಮಿಕ ವಿದ್ಯಾಭ್ಯಾಸ ವನ್ನು ಸ.ಕಿ.ಪ್ರಾ.ಶಾಲೆ ಅಚ್ರಪ್ಪಾಡಿಯಲ್ಲಿ ಪೂರೈಸಿ , ಗುತ್ತಿಗಾರು ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿರುತ್ತಾರೆ. ಬೆಂಗಳೂರಿನ ವೈ.ಎಂ.ಸಿ.ಎ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ತರಬೇತಿಯನ್ನು ಪಡೆದಿರುತ್ತಾರೆ.

1994 ರಲ್ಲಿ ಬಂಟ್ವಾಳದ ತುಂಬೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಉದ್ಯೋಗ ಕ್ಕೆ ಸೇರ್ಪಡೆಗೊಂಡರು. ಬಳಿಕ 2000 ನೇ ಇಸವಿಯಲ್ಲಿ ಆಲೆಟ್ಟಿ ಗ್ರಾಮದ ಕೋಲ್ಚಾರು ಸ.ಉ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು 9 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅಲ್ಲಿಂದ 2009 ರಲ್ಲಿ ದೇವಚಳ್ಳ ಸ.ಹಿ.ಪ್ರಾ.ಶಾಲೆಗೆ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ತನ್ನ ಸುದೀರ್ಘ 29 ವರ್ಷಗಳ ಕಾಲದ ವೃತ್ತಿ ಸೇವೆಯಿಂದ ಜೂ.30 ರಂದು ನಿವೃತ್ತಿಯಾಗಲಿದ್ದಾರೆ.

ಇವರು ಉದ್ಯೋಗಕ್ಕೆ ಸೇರ್ಪಡೆಗೊಳ್ಳುವ ಮೊದಲು 1993 ರಲ್ಲಿ ರಾಜಕೀಯ ಪ್ರವೇಶಿಸಿ ಅಮರಮುಡ್ನೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದು ಒಂದು ಅವಧಿಗೆ ಸದಸ್ಯರಾಗಿದ್ದರು.


ಇವರ ಪತಿ ನಿವೃತ್ತ ಕೆ.ಎಸ್.ಆರ್.ಟಿ.ಸಿ ಉದ್ಯೋಗಿ ತಿರುಮಲೇಶ್ವರ ಬೊಳ್ಳೂರು,
ಪುತ್ರಿಯರಾದ ಕು. ಅಶ್ವಿನಿ ಬೊಳ್ಳೂರು,
ಶ್ರೀಮತಿ ದೇವಿಕಾ ಬೊಳ್ಳೂರು ಮತ್ತು ಅಳಿಯ ಸಚಿನ್ ಶಿವರಾಜ್ ವಿದೇಶದ ಐರ್ಲೆಂಡಿನಲ್ಲಿ ಉದ್ಯೋಗಿ ಯಾಗಿರುತ್ತಾರೆ.


ಕು. ಚಂಪಾಶ್ರೀ ಬೊಳ್ಳೂರು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಪ್ರಸ್ತುತ ಇವರು ಅಮರಮುಡ್ನೂರು ಗ್ರಾಮದ ಬೊಳ್ಳೂರು ಎಂಬಲ್ಲಿ ವಾಸವಾಗಿದ್ದಾರೆ.