ಜಾಲ್ಸೂರು: ಟಿ.ಡಿ. ಟೈಲರ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಜಾಲ್ಸೂರಿನ ಸಿ‌.ಎಚ್. ಖಾದರ್ ಕಾಂಪ್ಲೆಕ್ಸ್ ನಲ್ಲಿ ಸುದೀರ್ಘ 42 ವರ್ಷಗಳ ಕಾಲ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ದಿವಾಕರ ಟೈಲರ್ ಜಾಲ್ಸೂರು ಅವರ ಮಾಲಕತ್ವದ ಟಿ.ಡಿ. ಟೈಲರ್ ಅಂಗಡಿ ಜಾಲ್ಸೂರಿನ ಎನ್.ಇ. ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಡಿ.ಸಿ.ಸಿ. ಬ್ಯಾಂಕ್ ಮುಂಭಾಗಕ್ಕೆ ಸ್ಥಳಾಂತರಗೊಂಡು ಜೂ.30ರಂದು ಶುಭಾರಂಭಗೊಂಡಿತು.

ಉದ್ಯಮಿ ಸಿ.ಎಚ್. ಅಬ್ದುಲ್‌ ಖಾದರ್ ಅವರು ಸಂಸ್ಥೆಯನ್ನು ದೀಪಬೆಳಗಿಸಿ, ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕತ್ತರ್ ಕಾಂಪ್ಲೆಕ್ಸ್ ಮಾಲಕ ಇಬ್ರಾಹಿಂ ಕತ್ತರ್ ಜಾಲ್ಸೂರು, ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ ಶೆಟ್ಟಿ, ಮಾಯಿಲಪ್ಪ ಗೌಡ ತೋಟಂಪಾಡಿ, ಲಿಂಗಪ್ಪ ಗೌಡ ತೋಟಂಪಾಡಿ, ಸಂಸ್ಥೆಯ ಮಾಲಕ ದಿವಾಕರ ಟೈಲರ್, ಚಂದ್ರಶೇಖರ ಕಾಳಮನೆ ಉಪಸ್ಥಿತರಿದ್ದರು.

ಇಲ್ಲಿ ಪುರುಷರ ಮತ್ತು ಮಹಿಳೆಯರ ಬಟ್ಟೆ ಹೊಲಿದು ಕೊಡಲಾಗುವುದು. ದಿವಾಕರ ಟೈಲರ್ ಅವರು ಪ್ರಸ್ತುತ ಸುಳ್ಯ ತಾಲೂಕು ಟೈಲರ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದು, ಮ್ಯಾರೇಜ್ ಬ್ಯೂರೋ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.