ಬೊಳುಬೈಲು: ನೆಕ್ರಾಜೆ ಪರಿಸದಲ್ಲಿ ಕಾಡುಕೋಣ ಹಾವಳಿ

0

ಅರಣ್ಯ ಇಲಾಖೆ ಕ್ರಮಕೈಗೊಳ್ಳುವಂತೆ ಪರಿಸರ ನಿವಾಸಿಗಳ ಒತ್ತಾಯ

ಜಾಲ್ಸೂರು ಗ್ರಾಮದ ಬೊಳುಬೈಲಿನ ನೆಕ್ರಾಜೆ ಪರಿಸರದಲ್ಲಿ ಕಾಡುಕೋಣದ ಹಾವಳಿ ಹೆಚ್ಚಾಗ ತೊಡಗಿದ್ದು, ಜು.9ರಂದು ಬೆಳಿಗ್ಗೆ ಮನೆಯೊಂದರ ಗೇಟಿನ ಬಳಿ ಕಂಡು ಬಂದಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

ಜಾಲ್ಸೂರು ಗ್ರಾಮ ಪಂಚಾಯತಿ ಸುಬ್ರಹ್ಮಣ್ಯ ಸಂಜೀವಿನಿ ಘಟಕದ ಅಧ್ಯಕ್ಷೆಯಾಗಿರುವ ಶ್ರೀಮತಿ ವೇದಾ ಶೆಟ್ಟಿ ನೆಕ್ರಾಜೆ ಅವರ ಮನೆಯ ಗೇಟಿನ ಬಳಿ ಬೃಹತಾದ ಕಾಡುಕೋಣವೊಂದು ಕಂಡುಬಂದಿದ್ದು, ಪರಿಸರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಬೊಳುಬೈಲು, ಕಾಟೂರು, ನೆಕ್ರಾಜೆ, ಮೋಂಟಡ್ಕ ಭಾಗದಲ್ಲಿ ಕಾಡುಕೋಣದ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಪರಿಸರದ ನಿವಾಸಿಗಳು ಒತ್ತಾಯಿಸಿದ್ದಾರೆ.