ಯುವ ಬ್ರಿಗೇಡ್ ಕಾರ್ಯಕರ್ತ, ಜೈನ ಮುನಿಗಳ‌ ಹತ್ಯೆ : ಸೂಕ್ತ ಕಾನೂನು ಕ್ರಮಕ್ಕೆ ರಾಜ್ಯಪಾಲರಿಗೆ ಯುವ ಬ್ರಿಗೇಡ್ ಮನವಿ

0

ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ಹತ್ಯೆ ಮತ್ತು ಚಿಕ್ಕೋಡಿಯ ಜೈನ ಮುನಿಗಳ ಹತ್ಯೆ ಖಂಡಿಸಿ ತಾಲೂಕು ದಂಡಾಧಿಕಾರಿಗಳ ಮುಖಾಂತರ ಸೂಕ್ತ ರೀತಿಯ ತನಿಖೆಗೆ ಆಗ್ರಹಿಸಿ ಯುವಬ್ರಿಗೇಡ್ ವತಿಯಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಮನೀಶ್ ಗೂನಡ್ಕ , ಬಜರಂಗದಳದ ಲತೀಶ್ ಗುಂಡ್ಯ , ಲೋಕೇಶ್ ಕೆರೆಮೂಲೆ , ಚಿಕ್ಕಣ್ಣ ಚಿದಾನಂದ ವಿದ್ಯಾನಗರ, ನವೀನ್ ಪರಿವಾರಾಕಾನ, ಚಿದಾನಂದ ಪರಿವಾರಕಾನ , ಅಶ್ವಥ್ ಆರಂತೋಡು , ಮಧು ಕಿರಣ್ , ರಂಜನ್ ಕಲ್ಲಗದ್ದೆ , ಶರವಣ , ವರ್ಷಿತ್ ಚೊಕ್ಕಾಡಿ , ನವೀನ್ ಎಲಿಮಲೈ , ಸತೀಶ್ ಪರಿವಾರಕಾನ , ಸತೀಶ್ ಕಾಟೂರು , ಸುರೇಶ್ ಅರಂಬೂರು , ಉಲ್ಲಾಸ್ ಮಾವಾಜಿ ಇನ್ನಿತರರು ಭಾಗವಹಿಸಿದ್ದರು .