ಚೆಂಬು : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಪದಾಧಿಕಾರಿಗಳ ಆಯ್ಕೆ

0

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಚೆಂಬು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಮನೋರಮ ಬೊಳ್ತಾಜೆ, ಉಪಾಧ್ಯಕ್ಷರಾಗಿ ಭುವನೇಶ್ವರ ಕೊಪ್ಪ, ಕೋಶಾಧಿಕಾರಿಯಾಗಿ ಧರ್ಮಲತಾ, ಕಾರ್ಯದರ್ಶಿಯಾಗಿ ಯತೀಶ ಕೆ.ಡಿ., ಜೊತೆ ಕಾರ್ಯದರ್ಶಿ ವಿಜಯ ಹೆಚ್. ಕೆ. ರವರನ್ನು ಆಯ್ಕೆ ಮಾಡಲಾಯಿತು.


ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರುಗಳು ಪದಾಧಿಕಾರಿಗಳಾದ ಕೃಷ್ಣವೇಣಿ, ಭವಾನಿ ಕುಮಾರ್ ಕೊಪ್ಪ, ಕುಸುಮ, ಗಿರೀಶ, ವಿಜಯ ಮತ್ತು ಸೇವಾ ಪ್ರತಿನಿಧಿ ಆರತಿ ಕಲಾಯಿ, ವಲಯ ಮೇಲ್ವಿಚಾರಕರಾದ ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.