ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಸಾಂಸ್ಕೃತಿಕ ಹಬ್ಬ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಜುಲೈ 07 ಮತ್ತು 08 ರಂದು ಸಾಂಸ್ಕೃತಿಕ ಹಬ್ಬ, ತರಗತಿವಾರು ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ಈ ಕಾರ್ಯಕ್ರಮವನ್ನು ಕಾಲೇಜಿನ ಪೂರ್ವ ವಿದ್ಯಾರ್ಥಿ ಹಾಗೂ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಕಲಾವಿದ ದೀಕ್ಷಿತ್ ಗೌಡ ಕುಂತೂರು ಪದವು ಇವರು ಉದ್ಘಾಟಿಸಿ, ಈ ಕಾಲೇಜು ತನಗೆ ಸಾಂಸ್ಕೃತಿಕವಾಗಿ ಬೆಳೆಯಲು ಎಷ್ಟೆಲ್ಲಾ ಅವಕಾಶ ಮಾಡಿಕೊಟ್ಟಿದೆ ಎಂಬುದನ್ನು ನೆನಪಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ದಿನೇಶ್ ಪಿ ಟಿ ವಹಿಸಿದ್ದರು. ಸಾಂಸ್ಕೃತಿಕ ಸಂಯೋಜಕರಾದ ವಿನ್ಯಾಸ್ ಹೊಸೊಳಿಕೆ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾದ ಕುಮಾರಿ ವಿದ್ಯಾ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಾವಿದ ದೀಕ್ಷಿತ್ ಗೌಡ ಕುಂತೂರು ಪದವು ಇವರನ್ನ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.ತದನಂತರ ದೀಕ್ಷಿತ್ ಗೌಡ ಇವರಿಂದ ಮಿಮಿಕ್ರಿ, ಪೂರ್ವ ವಿದ್ಯಾರ್ಥಿ ಸ್ವರಾಜ್ ಇವರಿಂದ ಗಾಯನ, ದೇವಿ ದಾಸ್ ಇವರಿಂದ ಕೊಳಲು ವಾದನ ಹರ್ಷಿತ್ ಇವರಿಂದ ತಬಲವಾದನ ನಡೆಯಿತು. ತದನಂತರ ನಡೆದ ಸ್ಪರ್ಧೆಯಲ್ಲಿ ಒಂಬತ್ತು ತರಗತಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

ಸಮಾರೋಪ ಸಮಾರಂಭದಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀವಸ್ತ್ಸಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಪರ್ಧೆಯಲ್ಲಿ ದ್ವಿತೀಯ ಬಿಕಾಂ ಎ ಪ್ರಥಮ ಸ್ಥಾನ, ಪ್ರಥಮ ಬಿಎ ದ್ವಿತೀಯ ಸ್ಥಾನ ಹಾಗೂ ಮತ್ತು ತೃತಿಯ ಬಿಕಾಂ ಬಿ ತೃತಿಯ ಸ್ಥಾನವನ ಗಳಿಸಿತು. ತೀರ್ಪುಗಾರರಾಗಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ನಿರೂಪಕರಾದ ಹರ್ಷಿತ್ ಪಡ್ರೆ ,ರಾಷ್ಟ್ರಮಟ್ಟದ ಕಲಾವಿದರಾದ ಪುರುಷೋತ್ತಮಕ್ಕೆ ಪದವು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಲವೀನಾ ಇವರು ಸಹಕರಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಪುಷ್ಪ ಡಿ ಇವರು ಸ್ವಾಗತಿಸಿ ಸಮಾಜಶಾಸ್ತ್ರ ಉಪನ್ಯಾಸಕಿ ಆರತಿ ಇವರು ವಂದಿಸಿದರು. ಕನ್ನಡ ಉಪನ್ಯಾಸಕರಾದ ಸುಮಿತ್ರ ಕೆ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.