ಪಯಸ್ವಿನಿ ಕಿಂಡಿ ಅಣೆಕಟ್ಟು ಗೇಟು ತೆರವು – ನೀರಿನ ಹೊರ ಹರಿವು

0

ಕಳೆದ ಒಂದು ವಾರಗಳಿಂದ ತಾಲೂಕಿನಾದ್ಯಂತ ವ್ಯಾಪಾಕ ಮಳೆಯಾಗಿದ್ದು, ಸುಳ್ಯದ ಜೀವನದಿ ಪಯಸ್ವಿನಿಯಲ್ಲೂ ನೀರು ತುಂಬಿದೆ. ನಾಗಪಟ್ಟಣದಲ್ಲಿ ಇರುವ ಕಿಂಡಿಅಣೆಕಟ್ಟಿನಲ್ಲಿಯೂ ನೀರು ಹೆಚ್ಚಳವಾಗಿದ್ದು, ಕಿಂಡಿ ಅಣೆಕಟ್ಟಿನ ಒಂದು ಗೇಟು ತೆಗೆದು ನೀರನ್ನು ಹೊರ ಹರಿಯಲು ಬಿಡಲಾಗುತ್ತಿದೆ.

ಕಳೆದ ಕೆಲ ತಿಂಗಳ ಹಿಂದೆ ಪಯಸ್ವಿನಿ ನದಿಯಲ್ಲಿ ನೀರಿನ ಶೇಖರಣೆಗಾಗಿ ನಾಗಪಟ್ಟಣದ ಕಿಂಡಿ ಅಣೆಕಟ್ಟಿಗೆ ಗೇಟು ಅಳವಡಿಸಲಾಗಿತ್ತು. ಇದರಿಂದಾಗಿ ಈ ಬಾರಿ ಸುಳ್ಯ ನಗರದಲ್ಲಿ ನೀರಿನ ಅಭಾವ ಕಂಡು ಬಂದಿರಲಿಲ್ಲ.

ಇದೀಗ ನೀರು‌ಹೆಚ್ಚಾಗಿದ್ದು ಗೇಟು ತೆಗೆದು ನೀರು ಹೊರ ಬಿಡಲಾಗಿದೆ.