ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಫಾಯಿ ಕರ್ಮಚಾರಿ, ಸ್ಮಶಾನ ಕಾರ್ಮಿಕ, ದೇವದಾಸಿ, ಮ್ಯಾನುವಲ್ ಸ್ಕ್ಯಾವೆಂಜ ಸಮುದಾಯದ ಮಕ್ಕಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

0

ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 2023-24 ನೇ ಸಾಲಿನ 6 ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಫಾಯಿ ಕರ್ಮಚಾರಿ, ಸ್ಮಶಾನ ಕಾರ್ಮಿಕ, ದೇವದಾಸಿ, ಮ್ಯಾನುವಲ್ ಸ್ಕ್ಯಾವೆಂಜ ಸಮುದಾಯದ ಮಕ್ಕಳಿಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಿ ನೇರವಾಗಿ ದಾಖಲಾತಿಯನ್ನು ನೀಡಲಾಗುವುದು.

ವಸತಿ ಶಾಲೆಗಳಲ್ಲಿ ಉಚಿತ ಊಟ ವಸತಿಯೊಂದಿಗೆ ಸಮವಸ್ತ್ರ, ಪಠ್ಯಪುಸ್ತಕ, ಲೇಖನ ಸಾಮಾಗ್ರಿಗಳು ಮೂಲಸೌಲಭ್ಯವನ್ನು ಒದಗಿಸಲಾಗುವುದು. ಈ ಸಮುದಾಯಗಳ ಪೋಷಕರು ತಮ್ಮ 6 ನೇ ತರಗತಿಯ ಮಕ್ಕಳನ್ನು ಹತ್ತಿರದ ಕರ್ನಾಟಕ ವಸತಿ ಶೈಕ್ಷಣಿಕ ಸೊಸೈಟಿ (ಕೈಸ್)ಯ ವಸತಿ ಶಾಲೆಗಳಿಗೆ ಭೇಟಿ ನೀಡಿ ದಾಖಲಾತಿ ಮಾಡಬಹುದು ಎಂದು ಮೊರಾರ್ಜಿ ದೇಸಾಯಿ ಪ್ರಾಂಶುಪಾಲರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.