ನಾರ್ಕೋಡಿನಲ್ಲಿ ದುರ್ಗಾ ಟ್ರೇಡರ್ಸ್ ಮತ್ತು ದುರ್ಗಾ ಚಿಕನ್ ಸೆಂಟರ್ ಶುಭಾರಂಭ

0

ಆಲೆಟ್ಟಿ ಮುಖ್ಯ ರಸ್ತೆಯಲ್ಲಿರುವ ಕುಡೆಕಲ್ಲು ಭರತ ಗೌಡ ರವರ ಮಾಲಕತ್ವದ ಕಟ್ಟಡದಲ್ಲಿ ಯತೀಶ್ ಬೆಳ್ಳೂರು ಮತ್ತು ಚಂದ್ರಶೇಖರ ಗುಂಡ್ಯ ರವರ ಪಾಲುದಾರಿಕೆಯ
ದುರ್ಗಾ ಟ್ರೇಡರ್ಸ್ ಮತ್ತು ದುರ್ಗಾ ಚಿಕನ್ ಸೆಂಟರ್ ಜು.14 ರಂದು
ಶುಭಾರಂಭ ಗೊಂಡಿತು.

ಕಟ್ಟಡ ಮಾಲಕ ಕುಡೆಕಲ್ಲು ಭರತ ಗೌಡ, ಗುಂಡ್ಯ ಕಾರ್ಯಪ್ಪ ಗೌಡ ,ಶಿವರಾಮ ಬಿ.ಟಿ
ಪುನೀತ್ ಕುಡೆಕಲ್ಲು, ಶ್ರೀಮತಿ ಹರಿಣಿ ಕುಡೆಕಲ್ಲು ದೀಪ ಬೆಳಗಿಸಿದರು.


ಈ ಸಂದರ್ಭದಲ್ಲಿ ಪ್ರವೀಣ್ ಅಟೋ ವರ್ಕ್ಸ್ ಮಾಲಕ ಪೊನ್ನಪ್ಪ ಗೌಡ ಬಿ.ಟಿ, ಯುವ ಉದ್ಯಮಿ ದುರ್ಗಾ ಅರ್ಥ್ ಮೂವರ್ಸ್ ಮಾಲಕ ಸುಧಾಕರ ಬೆಳ್ಳೂರು, ಕೇಶವ ಬೆಳ್ಳೂರು, ಶಿವಶಕ್ತಿ ಸ್ಟುಡಿಯೋ ಮಾಲಕ ಶುಭಕರ ಆರ್ನೋಜಿ, ಜನಾರ್ದನ ಗುಂಡ್ಯ, ರೂಪಾಕ್ಷ ಕರಂಟಡ್ಕ, ಸುನಿಲ್ ಗುಂಡ್ಯ,ಪುನೀತ್ ಬೆಳ್ಳೂರು,ಕಾರ್ತಿಕ್,ಚರಣ್ ಬಡ್ಡಡ್ಕ, ಜಗದೀಶ್ ಬಡ್ಡಡ್ಕ, ಶಿವರಾಮ ಗೌಡ ಬಿ.ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಪಾಲುದಾರ ಶ್ರವಣ್ ಗುಂಡ್ಯ ಮತ್ತು ಯತೀಶ್ ಬೆಳ್ಳೂರು ಸ್ವಾಗತಿಸಿದರು.

ದಿನ ಬಳಕೆಯ ಆಹಾರ ಪದಾರ್ಥಗಳು ರಖಂ ಮತ್ತು ಚಿಲ್ಲರೆ ದರದಲ್ಲಿ ದೊರಯುವುದಲ್ಲದೆ
ಬ್ರಾಯ್ಲರ್, ಟೈಸನ್, ನಾಟಿ ಕೋಳಿ ಹಾಗೂ ಕೋಳಿ ಮೊಟ್ಟೆ ದೊರೆಯುತ್ತದೆ.
ತಾಜಾ ಹಂದಿ ಮಾಂಸ ಹಾಗೂ ಒಣ ಮೀನು ಲಭ್ಯವಿದೆ.
ಯಾವುದೇ ರೀತಿಯ ಕಾರ್ಯಕ್ರಮಗಳಿಗೆ ಕೋಳಿ ಮಾಂಸ ಹಾಗೂ ಹಂದಿ ಮಾಂಸ ಬೇಕಾದಲ್ಲಿ ಹೋಲ್ ಸೇಲ್ ದರದಲ್ಲಿ ಒದಗಿಸಿಕೊಡಲಾಗುವುದು ಎಂದು ಪಾಲುದಾರರು ತಿಳಿಸಿದರು.