ಮಯೂರಿ ಮೋಂಟಡ್ಕ ಉದ್ಯೋಗ ನಿಮಿತ್ತ ವಿದೇಶಕ್ಕೆ

0

ಜಾಲ್ಸೂರು ಗ್ರಾಮ ಮೋಂಟಡ್ಕ ಮಯೂರಿಯವರು ಉದ್ಯೋಗ ನಿಮಿತ್ತ ನ್ಯೂಜಿಲ್ಯಾಂಡಿನ ಹಾಕ್ ಲ್ಯಾಂಡಿಗೆ ತೆರಳಿರುತ್ತಾರೆ.
ಬೆಂಗಳೂರಿನ ಇನ್ಫೋಸಿಸ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಇವರು ಉದ್ಯೋಗ ನಿಮಿತ್ತ ಜು.11 ರಂದು ವಿದೇಶಕ್ಕೆ ತೆರಳಿರುತ್ತಾರೆ.


ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ನಂತರ ಬೆಳ್ಳಾರೆ ಜ್ಞಾನಗಂಗಾದಲ್ಲಿ,ಪ್ರೌಢ ಶಿಕ್ಷಣವನ್ನು ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಹಾಗೂ ಪುತ್ತೂರಿನ ಅಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿ ನಂತರ ಕೆವಿಜಿ ಇಂಜಿನಿಯರಿಂಗ್ ಕಾಲೇಜಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮಾಡಿರುತ್ತಾರೆ.
ಬಳಿಕ ಕ್ಯಾಂಪಸ್ ಸೆಲೆಕ್ಷನ್ ಆಗಿ ಇನ್ಫೋಸಿಸ್ ನಲ್ಲಿ ಉದ್ಯೋಗದಲ್ಲಿದ್ದರು.


ಇವರು ಸುಳ್ಯ ಶೃಂಗಾರ್ ಬ್ಯೂಟಿ ಸೆಂಟರ್ ಮಾಲಕ ಎಂ.ಆರ್.ಚಿದಾನಂದ ಮೋಂಟಡ್ಕ ಮತ್ತು ಶ್ರೀಮತಿ ಭಾರತಿ ದಂಪತಿಯ ಪುತ್ರಿ.