ಜಾಲ್ಸೂರು: ಅಂಗಡಿ ಬೀಗ ಮುರಿದು ನಗದು ಕಳವು

0

ಅಂಗಡಿಯ ಬೀಗ ಮುರಿದು ನಗದು ಹಾಗೂ ಅಂಗಡಿ ಸಾಮಾಗ್ರಿಗಳನ್ನು ಕಳವುಗೈದ ಘಟನೆ ಜು.15ರಂದು ರಾತ್ರಿ ಸಂಭವಿಸಿದೆ.

ಜಾಲ್ಸೂರಿನ ಸಿಂಡಿಕೇಟ್ ಬ್ಯಾಂಕ್ ಸಮೀಪವಿರುವ ಜೋಗಿ ಬೈದರಕೊಳಂಜಿ ಎಂಬವರ ಅಂಗಡಿಯ ಬೀಗ ಮುರಿದ ಕಳ್ಳರು ಡ್ರಯರ್ ನಲ್ಲಿದ್ದ ಚಿಲ್ಲರೆ ಹಣ ಸೇರಿದಂತೆ ಸುಮಾರು ಎರಡು ಸಾವಿರ ನಗದು ಹಾಗೂ ಅಂಗಡಿ ಸಾಮಾಗ್ರಿಗಳಾದ ಸೋಪು, ಜ್ಯೂಸ್ ಬಾಟ್ಲಿಗಳನ್ನು ಕಳವುಗೈದಿರುವುದಾಗಿ ತಿಳಿದುಬಂದಿದೆ.

ಬೀಗ ಒಡೆದ ಕಬ್ಬಿಣದ ರಾಡನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.