ಅರಂಬೂರಿನ ಇಡ್ಯಡ್ಕ ಶಾಲೆಯಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

0

ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ, ಅರಂಬೂರು ಇಲ್ಲಿಗೆ ಮೆಂಡ ಫೌಂಡೇಶನ್, ಎಸ್.ಪಿ. ಗ್ಲೋಬಲ್ ಮತ್ತು ಸೆಲ್ಕೋ ಸೋಲಾರ್ ಸಂಸ್ಥೆಯ ಸಹಯೋಗದೊಂದಿಗೆ ಒಂದು ಲಕ್ಷ 75 ಸಾವಿರ ರೂ. ವೆಚ್ಚದಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಸಿಸ್ಟಮ್ ನ್ನು ಕೊಡುಗೆಯಾಗಿ ನೀಡಲಾಗಿದ್ದು, ಸಿಸ್ಟಮ್ ಅನ್ನು ಉದ್ಘಾಟಿಸುವ ಕಾರ್ಯಕ್ರಮ ಜು.22 ರಂದು ಶಾಲೆಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ರಮೇಶ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಸುದ್ದಿ ಬಿಡುಗಡೆಯ ಹರೀಶ್ ಬಂಟ್ವಾಳ್ ಅವರು ಸ್ಮಾರ್ಟ್ ಕ್ಲಾಸ್ ತಂತ್ರಜ್ಞಾನವನ್ನು ಉದ್ಘಾಟನೆ ಮಾಡಿದರು.
ಸೆಲ್ಕೋ ಸಂಸ್ಥೆ ಯ ಏರಿಯಾ ಮ್ಯಾನೇಜರ್ ಪ್ರಸಾದ್ ಬಿ. ಅವರು ಸೆಲ್ಕೋ ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಇ-ಶಾಲಾ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೇವಲ ಖಾಸಗಿ ಶಾಲೆಗಳ ಮಕ್ಕಳಿಗಷ್ಟೇ ಸೀಮಿತವಾಗಿದ್ದ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಸೆಲ್ಕೋ ಸಂಸ್ಥೆಯು ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೂ ನೀಡುವ ಯೋಜನೆ ಮಾಡಿದೆ ಎಂದು ಹೇಳಿದರು.

ಸ್ಮಾರ್ಟ್ ಕ್ಲಾಸ್ ತಂತ್ರಜ್ಞಾನವು ಸಂಪೂರ್ಣ ಸೌರ ಶಕ್ತಿ ಇಂದ ಉಪಯೋಗ ಆಗುತ್ತಿದ್ದು ದಿನನಿತ್ಯ ಮಕ್ಕಳಿಗೆ ಪಾಠ ಮಾಡಬಹುದು. ಸುಳ್ಯ ತಾಲ್ಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿ 25 ಕಿಂತ ಹೆಚ್ಚಿನ ಶಾಲೆಗಳಿಗೆ ಅಳವಡಿಕೆ ಮಾಡಿವೆ.

ವಿವಿಧ ಕಂಪೆನಿಗಳ ಸಾಮಾಜಿಕ ಭಾಧ್ಯತ ನಿಧಿಯ ಸಹಕಾರದೊಂದಿಗೆ ಸ್ಥಳೀಯ ಶಾಲೆಗಳ ನೆರವಿನಿಂದ ಈ ಯೋಜನೆಯನದನು ಅನುಷ್ಟಾನಗೊಳಿಸುತ್ತಿದ್ದು, ಈ ಬಾರಿ ಜಿಲ್ಲೆಯ ೨೦ ಶಾಲೆಗಳಿಗೆ ಸಂಪೂರ್ಣ ನೆರವಿನೊಂದಿಗೆ ಸ್ಮಾರ್ಟ್ ಕ್ಲಾಸ್ ಅಳವಡಿಸುವ ವ್ಯವಸ್ಥೆ ಮಾಡಿದೆ. ಸುಳ್ಯ ತಾಲೂಕಿನ 7 ಶಾಲೆಗಳಲ್ಲಿ ಈ ಯೋಜನೆ ಮಾಡಿದೆ. ಸ್ಥಳೀಯ ದಾನಿಗಳು ಸಹಕಾರ ನೀಡಿದರೆ ಇನ್ನೂ ಹೆಚ್ಚಿನ ಶಾಲೆಗಳಿಗೆ ಅನುಷ್ಠಾನ ಮಾಡಲು ಸೆಲ್ಕೋ ಸಂಸ್ಥೆಯಿಂದ ಸಹಕಾರ ನೀಡುತ್ತೇವೆ ಎಂದು ಹೇಳಿದರು. ಈ ಶಾಲೆಯ ಶಿಕ್ಷಕಿ ಮಾನಸರವರು ೨ ವರ್ಷದಿಂದ ಈ ಸ್ಮಾರ್ಟ್ ಕ್ಲಾಸ್ ಸಿಸ್ಟಮ್‌ಗಾಗಿ ನಮಗೆ ಬೇಡಿಕೆ ಇಡುತ್ತಿದ್ದುದರಿಂದ ಇದು ಸಾಧ್ಯವಾಗಿದೆ ಎಂದು ಅವರು ಸ್ಮರಿಸಿದರು.
ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಾಡಿದ ಹರೀಶ್ ಬಂಟ್ವಾಳ್ ಅವರು ವಿವಿಧ ಕ್ಷೇತ್ರಗಳಲ್ಲಿ ಸೌರಶಕ್ತಿಯ ಮಹತ್ವ ಹಾಗೂ ಪ್ರಯೋಜನ, ಸ್ಮಾರ್ಟ್ ಕ್ಲಾಸ್ ತಂತ್ರಜ್ಞಾನದಿಂದ ಶಾಲಾ ಮಕ್ಕಳಿಗೆ ಸಿಗುವ ಗುಣಮಟ್ಟದ ಶಿಕ್ಷಣದ ಬಗ್ಗೆ ವಿವರ ನೀಡಿದರು.

ಸೆಲ್ಕೋ ಸುಳ್ಯ ಶಾಖೆಯ ಮ್ಯಾನೇಜರ್ ಆಶಿಕ್ ಬಿ.ಎ. ಮಕ್ಕಳಿಗೆ ತಂತ್ರಜ್ಞಾನದ ಉಪಯೋಗ ಹಾಗೂ ಬಳಕೆ ಬಗ್ಗೆ ವಿವರಿಸಿದರು. ಸಭಾಧ್ಯಕ್ಷ ರಮೇಶ್ ಅವರು ಮಾತನಾಡಿ ಸರಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸುವುದರಿಂದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ಸಾಧ್ಯವಾಗುತ್ತದೆ. ಇನ್ನು ಮುಂದೆ ಈ ಪರಿಸರದ ಯಾವ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗದೆ ಸರಕಾರಿ ಶಾಲೆಗೆ ಬರುವಂತಾಗಬೇಕು ಎಂದರು.
ಶಾಲೆಯ ಸಹ ಶಿಕ್ಷಕಿ ಮಾನಸ ಅವರು ಶಿಕ್ಷಕರಿಗೆ ನೂತನ ತಂತ್ರಜ್ಞಾನದಿಂದಾದ ಉಪಯೋಗದ ಬಗ್ಗೆ ಅನಿಸಿಕೆ ಹೇಳಿದರು. ವಿದ್ಯಾರ್ಥಿನಿಯರಾದ ಆರಾಧ್ಯ ಮತ್ತು ಛಾಯಾಶ್ರೀ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಣ ಸಂಯೋಜಕಿ ಶ್ರೀಮತಿ ನಳಿನಿ, ಅಲೆಟ್ಟಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರೇಖಾ ಸರ್ವೋತ್ತಮ ಶೇಟ್ ಕಾರ್ಯಕ್ರಮದ ಕುರಿತು ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಕಲಾವತಿ ವಂದಿಸಿದರು. ದೈಹಿಕ ಶಿಕ್ಷಕರಾದ ಧನಂಜಯ ಮೇರ್ಕಜೆ ಕಾರ್ಯಕ್ರಮ ನಿರೂಪಿಸಿದರು. ಎಸ್‌ಡಿಎಂಸಿ ಸದಸ್ಯರು, ಶಾಲಾ ಪೋಷಕರು ಸೆಲ್ಕೋ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.