ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದಲ್ಲಿ ಆಟಿ ಆಚರಣೆ

0

ಆಲೆಟ್ಟಿ ಗ್ರಾಮದ ಕಸ್ತೂರಿ ಬಾ ಮಹಿಳಾ ಮಂಡಲದಲ್ಲಿ ಜು. 22 ರಂದು ಆಟಿ ಸಂಭ್ರಮಾಚರಣೆಯು ನಡೆಯಿತು. ಸಮಾರಂಭ ದ ಅಧ್ಯಕ್ಷತೆಯನ್ನು ಯಶೋಧ ಕುಡೆಕಲ್ಲು ವಹಿಸಿದ್ದರು.

ಗೌರವಾದ್ಯಕ್ಷೆ ಜಾನಕಿ ಕುಂಚಡ್ಕ, ಜಿಲ್ಲಾ ಒಕ್ಕೂಟದ ಸದಸ್ಯೆ ಸುಮನಾ ಕೃಪಾಶಂಕರ್, ನಿವೃತ್ತ ಮುಖ್ಯ ಶಿಕ್ಷಕಿ ಯಶೋಧ ಗುಂಡ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಆಟಿ ಆಚರಣೆಯ ಮಹತ್ವದ ಬಗ್ಗೆ ಯಶೋಧ ಗುಂಡ್ಯ ರವರು ತಿಳಿಸಿದರು.

ಮಹಿಳಾ ಮಂಡಲದ ಸದಸ್ಯರು ಹಲವು ಬಗೆಯ ಖಾದ್ಯಗಳನ್ನು ಮನೆಯಲ್ಲಿ
ತಯಾರಿಸಿ ತಂದರು. ಸಭೆಯ ನಂತರ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.