ನೆಲ್ಲೂರು ಕೆಮ್ರಾಜೆ ಗ್ರಾಮ‌ಸಭೆ

0

2022-23ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಜು.25ರಂದು ರಾಜೀವ್ ಗಾಂಧಿ ಸೇವಾ ಕೇಂದ್ರದ ದಲ್ಲಿ ನಡೆಯಿತು.‌

ಗ್ರಾ.ಪಂ. ಅಧ್ಯಕ್ಷೆ ಶೀಲಾವತಿ‌ ಬೊಳ್ಳಾಜೆ‌ ಅಧ್ಯಕ್ಷತೆ ವಹಿಸಿದ್ದರು. ಯುವಜನ‌ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ನೋಡೆಲ್ ಅಧಿಕಾರಿಯಾಗಿದ್ದರು.‌

ವೇದಿಕೆಯಲ್ಲಿ ಉಪಾಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆ, ಸದಸ್ಯರಾದ ರಾಮಚಂದ್ರ ಪ್ರಭು, ವೇಷುಗೋಪಾಲ ಪುನುಕುಟ್ಟಿ, ವೇಣುಗೋಪಾಲ ತುಂಬೆತ್ತಡ್ಕ, ಶ್ರೀಮತಿ ವಂದನಾ ಹೊಸ್ತೋಟ, ಶ್ರೀಮತಿ ವನಿತಾ ಬೊಳ್ಳಾಜೆ, ಶ್ರೀಮತಿ ಭಾಗೀರಥಿ ಎರ್ಮೆಟ್ಟಿ ಉಪಸ್ಥಿತರಿದ್ದರು. ‌

ಸಭೆಯಲ್ಲಿ ರಸ್ತೆ ಸಮಸ್ಯೆ, ನೀರಿನ‌ ಸಮಸ್ಯೆ, ಚರಂಡಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.