














ಇತ್ತೀಚೆಗೆ ಮಲೇಷ್ಯಾ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಮಹಲ್ ಹಿಜ್ರಾ ಇಂಟರ್ನ್ಯಾಷನಲ್ ಪ್ರಶಸ್ತಿ ಪುರಸ್ಕೃತರಾದ ಮರ್ಕಜ್ ಶಿಲ್ಪಿ ಇಂಡಿಯನ್ ಗ್ರ್ಯಾಂಡ್ ಮುಪ್ತಿ ಕಾಂದಪುರಂ ಎ.ಪಿ ಅಬೂಭಕ್ಕರ್ ಮುಸ್ಲಿಯಾರ್ ರವರನ್ನು ಸುಳ್ಯದ ಉಮರಾ ನಾಯಕರಾದ ಸುನ್ನಿ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ,ಅನ್ಸಾರಿಯ ಎಜುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ರವರು ಕ್ಯಾಲಿಕಟ್ ನಲ್ಲಿ ಮರ್ಕಜ್ ಪ್ರಧಾನ ಕಛೇರಿಗೆ ಭೇಟಿ ನೀಡಿ ಉಸ್ತಾದವರನ್ನು ಸನ್ಮಾನಿಸಿ ಗೌರವಿಸಿದರು.

ಇದೇ ಹರ್ಲಡ್ಕ ವಿಲ್ಲಾ ಉದ್ಘಾಟನ ಸಮಾರಂಭದ ಸವಿನೆನಪಿನ ಸ್ಮರಣಿಕೆ ನೀಡಿ ದುವಾಶಿರ್ವಚನ ಪಡೆದರು.
ಮಹಮ್ಮದ್ ಸಖಾಫಿ ವಿಳ್ಯಪ್ಪಲಿ,ಸಯಾಫ್ ಮುಳ್ಳೆರಿಯಾ,ಹಮೀದ್ ಕೊಡಿಂಬಾಳ ಉಪಸ್ಥಿತರಿದ್ದರು.









