ಪ್ರಸ್ತಿಕ್ ಕುದ್ಪಾಜೆ ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ

0

ಸುಳ್ಯ ಕಸಬಾ ಗ್ರಾಮದ ಪ್ರಸ್ತಿಕ್ ಕುದ್ಪಾಜೆಯವರು ಉದ್ಯೋಗ ನಿಮಿತ್ತ ಜು.30ರಂದು ಕುವೈತ್‌ಗೆ ತೆರಳಲಿದ್ದಾರೆ.

ಬೆಂಗಳೂರಿನ ಎಮ್‌ಎಸ್ ರಾಮಯ್ಯ ಕಾಲೇಜಿನಲ್ಲಿ ಹೋಟೇಲ್ ಮ್ಯಾನೇಜ್ಮೆಂಟ್ ಪದವಿ ಪಡೆದಿರುವ ಇವರು, ಬೆಂಗಳೂರಿನ ದಿ ಲಲಿತ್ ಅಶೋಕ್ , ರಮದಾ ವಿಂದಮ್ ಹೋಟೆಲ್‌ನಲ್ಲಿ ಇಂಟರ್‌ಶಿಪ್ ಮುಗಿಸಿದ್ದಾರೆ.

ಇದೀಗ ಗಿನ್ನಿಸ್ ವಲ್ಡ್ ರೆಕಾರ್ಡ್ ನಲ್ಲಿ ಹೆಸರು ಗಳಿಸಿರುವ ಕುವೈತ್‌ನ ರೇಡಿಶನ್ ಬ್ಲೂ ಹೋಟೆಲ್‌ನಲ್ಲಿ ಉದ್ಯೋಗ ಲಭಿಸಿದ್ದು, ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರಸ್ತಿಕ್ ಕುದ್ಪಾಜೆ ಪ್ರಾಥಮಿಕ ಶಿಕ್ಷಣವನ್ನು ರೋಟರಿ ಇಂಗ್ಲಿಷ್ ಮೀಡಿಯಾಂ ಸುಳ್ಯ., ಹೈಸ್ಕೂಲ್ ಶಿಕ್ಷಣವನ್ನು ಗ್ರೀನ್‌ವ್ಯೂ ವಿದ್ಯಾಸಂಸ್ಥೆ, ಪಿಯುಸಿ ಸವಣೂರು ವಿದ್ಯಾರಶ್ಮಿ & ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಪೂರೈಸಿದ್ದಾರೆ.

ಇವರು ಸುಳ್ಯ ಕಸಬಾ ಗ್ರಾಮದ ಕುದ್ಪಾಜೆ ಮನೆ ಲ|ದೇವಿಪ್ರಸಾದ್ ಕುದ್ಪಾಜೆ ಹಾಗೂ ಶ್ರೀಮತಿ ಲತಾಪ್ರಸಾದ್ ಕುದ್ಪಾಜೆ ದಂಪತಿಯ ಪುತ್ರ.
ತಂಗಿ ಪ್ರಸಕ್ತ ಕುದ್ಪಾಜೆ
ಮೈಸೂರಿನಲ್ಲಿ (BVA) ಕಲಿಯುತ್ತಿದ್ದಾರೆ.