ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ರವರ ಆಪ್ತ ಸಹಾಯಕರಾಗಿ ಸುಳ್ಯದ ಯುವ ನಾಯಕ ಕೀರ್ತನ್ ಕೊಡಪಾಲ ನೇಮಕ

0

ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ರವರ ಆಪ್ತ ಸಹಾಯಕರಾಗಿ ಯುವ ನಾಯಕ ಮಡಪ್ಪಾಡಿ ಗ್ರಾಮದ ಕೀರ್ತನ್ ಕೊಡಪಾಲ ರವರು ನೇಮಕಗೊಂಡಿದ್ದಾರೆ. ಇವರು ಇಂದು (ಜು.31)ರಂದು ಕರ್ತವ್ಯ ಕ್ಕೆ ಹಾಜರಾಗಿದ್ದಾರೆ. ಪ್ರಸ್ತುತ ಸುಳ್ಯ ವಿಧಾನ ಸಭಾ ಕ್ಷೇತ್ರದ ಎನ್ ಎಸ್ ಯು ಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಂಗಳೂರು ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಇವರು ಮಡಪ್ಪಾಡಿ ಗ್ರಾಮದ ಕೊಡಪಾಲ ದಿನೇಶ್ ಮತ್ತು ಶ್ರೀಮತಿ ವಸಂತಿ ದಂಪತಿಗಳ ಪುತ್ರ. ಪರೀಷ್ಮಾ ಸಹೋದರಿ.