ಬೈತಡ್ಕ : ಬೊಲೆರೊ – ಕಾರು ಅಪಘಾತ

0

ಬೊಲೆರೊ ಮತ್ತು ಕಾರಿನ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಾಲ್ಸೂರು ಗ್ರಾಮದ ಬೈತಡ್ಕದಲ್ಲಿ ಮೇ.29ರಂದು ಮಧ್ಯಾಹ್ನ ಸಂಭವಿಸಿದೆ.

ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಎ ಟಿ ಎಂ ಹಣ ಸಾಗಿಸುವ ಬೊಲೆರೋ, ಮಂಗಳೂರಿನಿಂದ ಸುಳ್ಯದ ಕಾಯರ್ತೋಡಿಯ ತಮ್ಮ ಮನೆಗೆ ಬರುತ್ತಿದ್ದ ನಿವೃತ್ತ ಉಪನ್ಯಾಸಕ ದೇವರಗುಂಡ ಶೇಷಪ್ಪ ಗೌಡರ ಕಾರಿಗೆ ಕಾರಲ್ಲಿದ್ದ ಶೇಷಪ್ಪ ಗೌಡರೂ, ಅವರ ಪತ್ನಿ, ಮಗಳು ಮತ್ತು ಮಗು ಈ ನಾಲ್ವರಿಗೂ ಗಾಯಗಳಾಗಿವೆ. ಶೇಷಪ್ಪ ಗೌಡರ ಕಾಲಿನ ಮೂಲೆ ಮುರಿದಿದ್ದು, ಅವರ ಪತ್ನಿ ಮತ್ತು ಪುತ್ರಿ ಇಬ್ಬರಿಗೂ ಗಾಯಗಳಾಗಿವೆ.


ಅಪಘಾತ ಸ್ಥಳದಿಂದ ನ.ಪಂ. ಸದಸ್ಯ ಶರೀಫ್ ಕಂಠಿಯವರ ಕಾರಿನಲ್ಲಿ ಕಂಠಿ ಹಾಗೂ ಕರ್ನಾಟಕ ಫ್ಲೈವುಡ್‌ನ ಹರೀಶ್ ಕಾಮತ್‌ರವರು ಇಬ್ಬರು ಗಾಯಾಳುಗಳನ್ನು ಕೆವಿಜಿಗೆ ಕರೆತಂದರೆ, ಇನ್ನಿಬ್ಬರನ್ನು ನವೀನ್ ದೇವರಗುಂಡ ರವರು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆತಂದರು.
ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.