ಸಂಪಾಜೆ : ಕಾರುಗಳ ನಡುವೆ ಡಿಕ್ಕಿ, ಜಖಂ

0

ಸಂಪಾಜೆ ಗೇಟ್ ಬಳಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಕಾರುಗಳು ಜಖಂ ಗೊಂಡ ಘಟನೆ ಇಂದು ಸಂಜೆ ವರದಿಯಾಗಿದೆ.
ಮಡಿಕೇರಿಯಿಂದ ಪುತ್ತೂರು ಕಡೆ ಬರುತ್ತಿದ್ದ ನ್ಯಾನೋ ಕಾರು ಗುತ್ತಿಗಾರು ಭಾಗದಿಂದ ಕುಶಾಲನಗರ ಹೋಗುತ್ತಿದ್ದ ಕಾರಿನ ನಡುವೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ .


ಘಟನೆಯಿಂದ ಯಾವುದೇ ಅಪಾಯಗಳು ಸಂಭವಿಸದೆ ಎರಡು ಕಾರುಗಳ ಮುಂಭಾಗ ಜಖಂ ಗೊಡಿದ್ದು ಮಾತುಕತೆಯ ಮೂಲಕ ಇತ್ಯರ್ಥಪಡಿಸಿರುವುದಾಗಿ ತಿಳಿದುಬಂದಿದೆ.