














ಶ್ರೀ ಶಾರದ ಹೆಣ್ಣು ಮಕ್ಕಳ ಪ್ರೌಢ ಶಾಲೆ ಸುಳ್ಯ ಇವರ ಆಶ್ರಯದಲ್ಲಿ ನಡೆದ ಇಲಾಖಾ ಮಟ್ಟದ ಬಾಲಕ ಬಾಲಕಿಯರ ಸುಳ್ಯ ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಶಾಲಾ ತಂಡದಲ್ಲಿ ತಪಸ್ಯ ಎಸ್ ನಾಯಕ್, ಹನಿ, ಸಮೀಕ್ಷಾ, ಚಿನ್ಮಯಿ ಕೆ ಎಸ್ ಹಾಗೂ ಪ್ರೇಕ್ಷ ಟಿ ಎಂ ಭಾಗವಹಿಸಿದ್ದರು.









