ದೇವಚಳ್ಳ ಗ್ರಾ.ಪಂ.: ಮುಂದೂಡಲ್ಪಟ್ಟ ಅಧ್ಯಕ್ಷ ಚುನಾವಣೆ ಇಂದು

0

ಇಂದು ಎರಡು ನಾಮಪತ್ರ ಸಲ್ಲಿಕೆ : ಮತ್ತೆ ಕೂತೂಹಲದತ್ತ ಚುನಾವಣೆ

ಆ.9ರಂದು ನಿಗದಿಯಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಕೆಯಾಗಿದ್ದ ಒಂದು ನಾಮಪತ್ರ ಹಿಂಪಡೆದ ಪರಿಣಾಮ ಅಧ್ಯಕ್ಷ ಸ್ಥಾನ ಮುಂದೂಡಲ್ಪಟ್ಟು ಇಂದು ಅಧ್ಯಕ್ಷರ ಆಯ್ಕೆಗೆ ದಿನ‌ ನಿಗದಿಯಾಗಿತ್ತು. ..

ಮೊನ್ನೆ ನಾಮಪತ್ರ ಸಲ್ಲಿಸಿದ್ದ ಸುಲೋಚನಾ ದೇವ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರೇಮಲತಾ ಕೇರ ಇಂದು ನಾಮ ಪತ್ರ ಸಲ್ಲಿಸಿದ್ದಾರೆ.

ಈ ಮಧ್ಯೆ ನಿನ್ನೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆಯವರು ದೇವಚಳ್ಳಕ್ಕೆ ಬಂದು ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.