ಕಲ್ಚರ್ಪೆ ಕಸದ ರಾಶಿಯ ಮೇಲೆ ಮಣ್ಣು ಹಾಕಿ ಮುಚ್ಚಿರುವ ಆರೋಪ ಸ್ಥಳೀಯರ ಆಕ್ರೋಶ

0

ಕಸ ತೆರವುಗೊಳಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಕಲ್ಚರ್ಪೆ ಅರಣ್ಯ ಪರಿಸರದಲ್ಲಿ ಕಳೆದ ಒಂದು ವಾರಗದ ಮೊದಲು ಕಸದ ರಾಶಿಯನ್ನು ಸುರಿದಿದ್ದು, ಸ್ಥಳೀಯರ ಆಕ್ರೋಶದಿಂದ ಸ್ಥಳಕ್ಕೆ ಬಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಸ ವಿಲೇವಾರಿ ಮಾಡಿಕೊಡುವ ಭರವಸೆಯನ್ನು ನೀಡಿ ಬಂದಿದ್ದರು.

ಆದರೆ ಕಸ ತೆರವುಗೊಳಿಸುವುದನ್ನು ಬಿಟ್ಟು ಮೇಲ್ಭಾಗದ ಅಲ್ಪಸ್ವಲ್ಪ ಕಸವನ್ನು ತೆಗೆದು ಉಳಿದ ಕಸಗಳಿಗೆ ಮುಚ್ಚಿ ಹಾಕಿ ಮುಚ್ಚಿ ಸಂಬಂಧಪಟ್ಟ ಇಲಾಖೆಯವರು ಸ್ಥಳೀಯರ ಕಣ್ಣಿಗೆ ಮಣ್ಣೆರಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಈ ಬಗ್ಗೆ ಸುದ್ದಿಯೊಂದಿಗೆ ಮಾತನಾಡಿರುವ ಸ್ಥಳೀಯ ನಿವಾಸಿ ಅಶೋಕ ಪೀಚೆ ಎಂಬವರು ಕಸದ ರಾಶಿಯನ್ನು ತಂದು ಹಾಕುವ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ಅದನ್ನು ತಡೆದಿದ್ದವು. ಇದರಿಂದ ಮಾಧ್ಯಮಗಳಲ್ಲಿ ವರದಿಯು ಕೂಡ ಬಿತ್ತರಗೊಂಡಿದ್ದವು. ಬಳಿಕ ಸ್ಥಳಕ್ಕೆ ಬಂದು ವೀಕ್ಷಣೆ ನಡೆಸಿದ್ದ ಸುಳ್ಳ ಶಾಸಕರು ಮತ್ತು ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿ ರಾಶಿ ಹಾಕಿರುವ ಕಸವನ್ನು ಕೂಡಲೇ ತೆರವುಗೊಳಿಸಿಕೊಡುವ ಭರವಸೆಯನ್ನು ನೀಡಿ ಹೋಗಿದ್ದರು. ಆದರೆ ನಿನ್ನೆ ಸಂಜೆ ಇದಕ್ಕೆ ಸಂಬಂಧಪಟ್ಟ ಕೆಲಸದವರು ಬಂದು ಅಲ್ಪ ಸ್ವಲ್ಪ ಕಸವನ್ನು ತೆಗೆದು ಉಳಿದ ಕಸದ ಮೇಲೆ ಮಣ್ಣು ಮುಚ್ಚಿ ಹೋಗಿರುತ್ತಾರೆ.

ಈಗ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಇದು ಕಾಣಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸಾರ್ವಜನಿಕರು ಈ ರೀತಿ ಮಾಡಿದ್ದರೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಬೇರೆ ಬೇರೆ ರೀತಿಯ ಕಾನೂನು ಕ್ರಮವನ್ನು ಕೈಗೊಳ್ಳುತ್ತಿದ್ದರು.

ಇದೀಗ ಅರಣ್ಯ ಅಧಿಕಾರಿಗಳು ಏಕೆ ಸುಮ್ಮನಾಗಿದ್ದಾರೆ ಎಂದು ಪ್ರಶ್ನಿಸಿದರು.
ಕಸವನ್ನು ತೆರೆವುಗೊಳಿಸದಿದ್ದಲ್ಲಿ ಸ್ಥಳೀಯರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.