ಗುತ್ತಿಗಾರು : ಪೈಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

0

ಗುತ್ತಿಗಾರು ಗ್ರಾಮದ ಪೈಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನವು ಆ.12 ರಂದು ನಡೆಯಿತು.

ಶಾಲೆಯ ಸುತ್ತಮುತ್ತ ಕಾಡು ಕಡಿಯಲಾಯಿತು.

ತೆಂಗಿನ ಮರದ ಬುಡ ಬಿಡಿಸಿ,ಸೊಪ್ಪು ಗೊಬ್ಬರ ಹಾಕಲಾಯಿತು. ಅಲ್ಲದೆ ಶಾಲಾ ವಾತವರಣದಲ್ಲಿರುವ ಕಸ,ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.
ಶ್ರಮಸೇವೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ಒಕ್ಕೂಟದ ಸಂಘಗಳ ಸದಸ್ಯರು,

ಶೌರ್ಯ ವಿಪತ್ತು ತಂಡದ ಸದಸ್ಯರು,ಶಾಲಾ ಹಿರಿಯ ವಿದ್ಯಾರ್ಥಿಗಳು,ಮಕ್ಕಳ ಪೋಷಕರು, ಊರಿನ ವಿದ್ಯಾಭಿಮಾನಿಗಳು ಭಾಗವಹಿಸಿದ್ದರು.