ಹರ್ಲ ಫೌಂಡೇಶನ್ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಹಾಗೂ ಹಜ್ ಯಾತ್ರೆ ಸಂಯೋಜಕರಿಗೆ ಸನ್ಮಾನ

0

ಸುಳ್ಯ ಹರ್ಲ ಪೌಂಡೇಶನ್ ವತಿಯಿಂದ ಸುಳ್ಯದಿಂದ ಹಜ್ ಯಾತ್ರೆ ಕೈಗೊಳ್ಳುವರಿಗೆ ಬೀಳ್ಕೊಡುಗೆ ಹಾಗೂ ಹಜ್ ಯಾತ್ರೆ ಸಂಯೋಜಕರಾಗಿ ಸೇವೆ ಮಾಡುವ ಸುಳ್ಯ ಏ.ಆರ್ ಟ್ರೇಡರ್ಸ್ ಮಾಲಕರಾದ ಹಸನ್ ಹಾಜಿ ಹಸನ್ ರವರಿಗೆ ಸನ್ಮಾನಿಸುವ ಕಾರ್ಯಕ್ರಮ ಹರ್ಲಡ್ಕ ವಿಲ್ಲಾದಲ್ಲಿ ನಡೆಯಿತು.


ಸಯ್ಯದ್ ಮುಹ್ಸಿನ್ ತಂಙಳ್ ಕಲ್ಲೇರಿ ಹಾಗೂ ಪೆರೋಡ್ ಅಬ್ದುಲ್ ರಹಿಮಾನ್ ಸಖಾಫಿ ಯವರು ದುವಾಶಿರ್ವಚದೊಂದಿಗೆ ಹಜ್ ಯಾತ್ರಾರ್ಥಿಗಳನ್ನು ಬೀಳ್ಕೊಡಲಾಯಿತು.
ಅನ್ಸಾರಿಯಾ ಶಾದಿಮಹಲ್ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಪಟೇಲ್,ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ,ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಗಳ ಸಂಚಾಲಕ ಹಾಜಿ ಅಬ್ದುಲ್‌ ಹಮೀದ್ ಎಸ್ ಎಂ,ಬಿ.ಎಂ ಅಬೂಭಕ್ಕರ್ ಹಾಜಿ,ಅಬ್ದುಲ್ ಖಾದರ್ ಹಾಜಿ ಕಲ್ಲಪಳ್ಳಿ,ಎಸ್ ಎಂ ಎ ಅಧ್ಯಕ್ಷ ಹಮೀದ್ ಬೀಜಕೊಚ್ಚಿ, ಹನೀಫ್ ದೇಲಂಪಾಡಿ,ಅನ್ಸಾರಿಯ ಜಿಸಿಸಿ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಸಲೀಂ ಇಸ್ಮಾಯಿಲ್,ಬಾಬ ಹಾಜಿ ಎಲಿಮಲೆ,ಎಲಿಮಲೆ ಜಮಾಹತ್ ಕಮಿಟಿ ಕಾರ್ಯದರ್ಶಿ ಸಿದ್ದೀಕ್ ಮೊದಲಾದವರು ಉಪಸ್ಥಿತರಿದ್ದರು.


ಹರ್ಲ ಫೌಂಡೇಶನ್ ಅಧ್ಯಕ್ಷ ಲತೀಪ್ ಹರ್ಲಡ್ಕ ಸ್ವಾಗತಿಸಿದರು
.