ಅರಂತೋಡು ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಶ್ರಮದಾನ

0

ಅಂಬೇಡ್ಕರ್ ರಕ್ಷಣಾ ವೇದಿಕೆ ಅರಂತೋಡು ಘಟಕದ ವತಿಯಿಂದ ಅರಂತೋಡು ನೆಹರು ಮೆಮೋರಿಯಲ್ ಕಾಲೇಜು (ಎನ್ ಎಂ ಎಂ ಪಿ ಯು) ಆವರಣದಲ್ಲಿ ಆ. 13ರಂದು ಶ್ರಮದಾನ ನಡೆಯಿತು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸಿ, ಸಂಘಟನೆಯ ದ್ವಜಾರೋಹಣ ಮಾಡುವ ಮೂಲಕ ಶ್ರಮದಾನಕ್ಕೆ ಕಾಲೇಜಿನ ಪ್ರಾಂಶುಪಾಲರಾದ ರಮೇಶ್.ಎಸ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಂದು ಸಂಘಟನೆಯ ಮೂಲಕ ನಮ್ಮ ಕಾಲೇಜು ಪರಿಸರವನ್ನು ಶ್ರಮದಾನ ಮಾಡಿದ್ದು ಇದೊಂದು ಉತ್ತಮ ಕಾರ್ಯವಾಗಿದೆ. ಸಂಘಟನೆಯ ಎಲ್ಲಾ ಸದಸ್ಯರಿಗೆ ಮಹಿಳಾ ಸದಸ್ಯರಿಗೂ ಇನ್ನಷ್ಟು ಸಾಮಾಜಿಕ ಕೆಲಸ ಕಾರ್ಯಗಳನ್ನು ನಡೆಸುವಂತಾಗಲಿ ಎಂದು ಶುಭ ಹಾರೈಸಿ ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಕಾಲೇಜಿನ ಎನ್. ಎಸ್. ಎಸ್ ಸಂಘಟನೆಯ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಎನ್. ಎಸ್. ಎಸ್ ಕಾಯ೯ಕ್ರಮಾಧಿಕಾರಿ ಲಿಂಗಪ್ಪ ಪೂಜಾರಿ, ಉಪನ್ಯಾಸಕರಾದ ಸುರೇಶ್ ವಾಗ್ಲೆ, ಶ್ರೀಮತಿ ಭಾಗ್ಯಶ್ರೀ ಮತ್ತು ಶ್ರೀಮತಿ ಅಶ್ವಿನಿ ಕೆ .ಎಂ,
ಎನ್. ಎಸ್. ಎಸ್ ನಾಯಕ ಮನ್ವಿತ್,

ಕಾಲೇಜಿನ ಸಂಚಾಲಕ ಕೆ.ಆರ್ . ಗಂಗಾಧರ ಮತ್ತು ಎನ್. ಎಸ್. ಎಸ್. ಸ್ವಯಂ ಸೇವಕರು ಉಪಸ್ಥಿತರಿದ್ದರು.
ಕಾಯ೯ಕ್ರಮದ ನಿರೂಪನೆಯನ್ನು ಸಂಘಟನೆಯ ತಾಲೂಕು ಕಾಯ೯ದಶಿ೯ ತೇಜಕುಮರ್ ಅರಮನೆಗಯ ನೆರವೇರಿಸಿದರು.

ಪ್ರಾಥ೯ನೆಯನ್ನು ಪ್ರಥಮ ಪಿ.ಯು.ಸಿ ವಿದ್ಯಾಥಿ೯ನಿಯರಾದ ಕು.ವಂಶಿ, ಕು.ಪೂಜಾ ಮತ್ತು ಕು. ಸುರಕ್ಷ ನೆರವೇರಿಸಿದರು.
ಅರಂತೋಡು ಘಟಕದ ಅಧ್ಯಕ್ಷರಾದ ನವೀನ್ ಕಲ್ಲುಗುಡ್ಡೆ ವಂದಿಸಿದರು. ವೇದಿಕೆಯಲ್ಲಿ ಸದಸ್ಯರುಗಳಾದ

ರಾಮಕೃಷ್ಣ ಅರಮನೆಗಯ, ಬಾಲಚಂದ್ರ ಜೋಗಿಮೂಲೆ, ಚಂದ್ರಶೇಖರ ಕುಂಪುಲಿ, ಧನಂಜಯ ಕುಂಪುಲಿ, ಗಂಗಾಧರ ಕುಂಪುಲಿ, ಚಂದ್ರಶೇಖರ ಅರಮನೆಗಯ, ಲಕ್ಷ್ಮೀಶ್ ಬಳ್ಳಕಾನ, ಸುಮತಿ ಅರಮನೆಗಯ, ರುಕ್ಮಿಣಿ ಕುಂಪುಲಿ, ಸೀತಮ್ಮ ಕುಂಪುಲಿ,

ಶೇಶಪ್ಪ ಅರಮನೆಗಯ, ಚಿದಾನಂದ ಮಡಪ್ಪಾಡಿ, ಲೊಕೇಶ್ ಅರಮನೆಗಯ, ಪ್ರದೀಪ್ ಪಾರೆಪ್ಪಾಡಿ ಶ್ರಮದಾನದಲ್ಲಿ ಭಾಗವಹಿಸಿದ್ದರು.