ಸವಣೂರಿನಲ್ಲಿ 12ನೇ ವರ್ಷದ ಸ್ಥಾಪಕರ ದಿನಾಚರಣೆಶೀಂಟೂರು ಸ್ಮೃತಿ – 2023

0

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ
ಸ್ಥಾಪಕರಾದ ಶೀಂಟೂರು ನಾರಾಯಣ ರೈಯವರ 12ನೇ ವರ್ಷದ ಸ್ಥಾಪಕರ ದಿನಾಚರಣೆ ಸವಣೂರು ವಿದ್ಯಾಗಂಗೋತ್ರಿಯ ವಿದ್ಯಾಚೇತನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್‌ ರೈ ವಹಿಸಿದ್ದರು. ಮುಂಬಯಿಯ ಹೇರಂಭ ಇಂಡಸ್ಟ್ರೀಸ್ ಅಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಇಂಡಿಯನ್ ನೇವಿ ಚೀಫ್ ಇಲೆಕ್ಟ್ರಿಕಲ್ ಆರ್ಟಿಫಿಶರ್ ರೆಡಿಯೋ ಚಿಯರ್ (ನಿವೃತ್ತ) ವಿಕ್ರಂ ದತ್ತರಿಗೆ ಶೀಂಟೂರು ಸನ್ಮಾನ ಮಾಡಿದರು. ಮಂಗಳೂರು ಕಾಲೇಜ್ ಆಫ್ ಫಿಷರೀಸ್ ನ ನಿವೃತ್ತ ಡೈರೆಕ್ಟರ್ ಆಫ್ ಇನ್ಸ್ಟಕ್ಷನ್ ಪ್ರೊ. ಡಾ. ಡಿ.ಎಸ್. ಶೇಷಪ್ಪ ಶೀಂಟೂರು ಸಂಸ್ಕರಣೆ ಮಾಡಿದರು.

ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ದುಬೈ ಕ್ವರಿಯತ್ ಅಲ್ ಶಮ್ಸ್ ಬಿಲ್ಡಿಂಗ್ ಕನ್ಸ್ಟ್ರಕ್ಟಿಂಗ್ ಎಲ್.ಎಲ್.ಸಿ. ಮೇನೇಜಿಂಗ್ ಡೈರೆಕ್ಟರ್ ಅಶ್ರಫ್ ಮಾಂತೂರು ಅತಿಥಿಗಳಾಗಿ ಭಾಗವಹಿಸಿದ್ದರು. ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ವಿಶ್ವಸ್ಥರಾದ ಎನ್. ಸುಂದರ ರೈ ಸವಣೂರು ಮತ್ತು ಸವಣೂರು ವಿದ್ಯಾರಶ್ಮಿ ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಇಂ. ಅಶ್ವಿನ್ ಎಲ್. ಶೆಟ್ಟಿ ಗೌರವ ಉಪಸ್ಥಿತರಾಗಿ ಮತ್ತು ಟ್ರಸ್ಟಿ ಶ್ರೀಮತಿ ರಶ್ಮಿ ಅಶ್ವಿನ್ ಶೆಟ್ಟಿ, ನ್ಯಾಯವಾದಿ ಎನ್. ಜಯಪ್ರಕಾಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ. ಸೀತಾರಾಮ ರೈ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಎನ್. ಜಯಪ್ರಕಾಶ್ ರೈ ವಂದಿಸಿದರು.

ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲರಾದ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು . ಕು. ವೈಷ್ಣವಿ ನಾಲ್ನುಡಿ ಹೇಳಿದರು. ವಿದ್ಯಾರ್ಥಿನಿ ಕು. ಸ್ಪರ್ಶ ಜೆ. ಶೆಟ್ಟಿ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸ ವೃಂದ, ಬೋಧಕೇತರ ಸಿಬ್ಬಂದಿ, ಎಸ್. ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಂದೆಯವರು ತೋರಿಸಿಕೊಟ್ಟ ಹಾದಿಯಲ್ಲಿ ಮುನ್ನಡೆದು, ಅವರ ಕನಸಿನ ವಿದ್ಯಾಸಂಸ್ಥೆಗಳನ್ನು ಬೆಳೆಸಿಕೊಂಡು ಬಂದಿದ್ದೇವೆ. ಅವರ ಆದರ್ಶಗಳನ್ನು ಮುಂದಿನ ಜನಾಂಗಕ್ಕೆ ತಿಳಿಯಪಡಿಸುವ ಉದ್ದೇಶದಿಂದ ಅವರನ್ನು ನೆನಪಿಸಿಕೊಳ್ಳುವುದು ಮಕ್ಕಳಾದ ನಮ್ಮ ಕರ್ತವ್ಯ ಎನ್ನುವ ನೆಲೆಯಲ್ಲಿ ಶೀಂಟೂರು ಸ್ಮೃತಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ – ಸವಣೂರು ಕೆ. ಸೀತಾರಾಮ ರೈ

ಎಲ್ಲಾ ತಂದೆ ತಾಯಿಯರೂ ತಮ್ಮ ಮಕ್ಕಳಿಗೆ ಹೇಗೆ ಜೀವಿಸಬೇಕೆಂದು ಹೇಳುತ್ತಾರೆ. ನಾವದನ್ನು ಎಷ್ಟು ಪಾಲಿಸುತ್ತೇವೆ. ಆದರೆ ಸೀತಾರಾಮ ರೈಯವರು ಅಕ್ಷರಶಃ ಪಾಲಿಸಿಕೊಂಡು ಬಂದಿದ್ದಾರೆ. ತಮ್ಮ ಸಂಪಾದನೆಯ ಒಂದಷ್ಟನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡು ಬಂದಿದ್ದಾರೆ. ನಮ್ಮ ತಂದೆ ತಾಯಿಯರಿಗೆ ಬೇರೇನೂ ಕೊಡದಿದ್ದರೂ ಪ್ರೀತಿ ಕೊಡಿ. ಆಗ ಸಮಾಜ ಗೌರವಿಸುತ್ತದೆ. ದೇವರ ಅನುಗ್ರಹ ಲಭಿಸುತ್ತದೆ – ಅಶೋಕ್ ಕುಮಾರ್ ರೈ

ಶಿಷ್ಯರನ್ನು ನೋಡುವಾಗ ಗುರು ಹೇಗಿದ್ದರು ಎಂದು ತಿಳಿಯುತ್ತದೆ. ಸಮಾಜಕ್ಕೆ ಉತ್ತಮ ಪ್ರಜೆಯನ್ನು ಕೊಡಲು ಒಬ್ಬ ಉತ್ತಮ ಶಿಕ್ಷಕನಿಂದ ಮಾತ್ರ ಸಾಧ್ಯ. ಪಾರಮಾರ್ಥಿಕ ವಿದ್ಯೆಯ ಜೊತೆಗೆ ಆತ್ಮೋದ್ಧಾರವನ್ನು ವಿದ್ಯೆಯನ್ನು ಕಲಿತು ಸಮಾಜಕ್ಕೆ ಮಾರ್ಗದರ್ಶಕರಾದವರು ಶೀಂಟೂರು ನಾರಾಯಣ ರೈಯವರು – ಡಾ. ಡಿ.ಎಸ್. ಶೇಷಪ್ಪ

ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವಾದ ಸೇವೆ ಸಲ್ಲಿಸಲು ಅವಕಾಶ ಸಿಗೋದಾದ್ರೆ ಅದು ಭಾರತೀಯ ಸೇನೆಯಲ್ಲಿ ಮಾತ್ರ. ತಮ್ಮ ಜೀವನದಲ್ಲಿ ಸೇನಾನಿಯಾಗಿ, ಬಳಿಕ ಶಿಕ್ಷಕರಾಗಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಮೂಲಕ ದೇಶ ಕಟ್ಟುವ ಕೆಲಸ ಮಾಡಿದ್ದಾರೆ. ಹಾಗಾಗಿ ಶೀಂಟೂರು ನಾರಾಯಣ ರೈಯವರು ನಿಜವಾದ ದೇಶಭಕ್ತರು – ವಿಕ್ರಂ ದತ್ತ