ದೇವರಕಾನ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ – ವಿದ್ಯಾರ್ಥಿಗಳಿಂದ ಜಾಥಾ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಕಾನದಲ್ಲಿ 76ನೆಯ ಸ್ವಾತಂತ್ರ್ಯ ದಿನವನ್ನು ಆ.15 ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ದಲ್ಲಿ ಪದ್ಮನಾಭ ಗೌಡ ನೂಜಾಲು, ಐವರ್ನಾಡು ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ ಕುಳ್ಳಂಪಾಡಿ, ಎಸ್ ಡಿ ಎಂ ಸಿ ಅಧ್ಯಕ್ಷ ಧರ್ಮಪಾಲ ಪೊಯ್ಯೆಮಜಲು, ಉಪಾಧ್ಯಕ್ಷೆ ಮಮತಾ ಎಡಮಲೆ, ಎಸ್ ಡಿ ಎಂ ಸಿ ನಿಕಟಪೂರ್ವ ಅಧ್ಯಕ್ಷರಾದ ನವೀನ್ ಕುಮಾರ್ ಸಾರಕರೆ ಪೋಷಕರು, ಶ್ರೀಮತಿ ಸರೋಜಿನಿ ಕುಳ್ಳಂಪಾಡಿ,ಸೋನಂಗೇರಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿರುವ ಅನುರಾಧ ಎ. ಆರ್ ಹಾಗೂ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದರು. ಪದ್ಮನಾಭ ಗೌಡ ನೂಜಾಲು ಅವರು ಧ್ವಜಾರೋಹಣಗೈದರು. ಸಭಾ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳ ಪ್ರಾರ್ಥನೆಯ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಮತ್ತು ದಿವಂಗತ ಚೆನ್ನಪ್ಪ ಗೌಡ ಕುಳ್ಳಂಪಾಡಿ ಅವರ ಸ್ಮರಣಾರ್ಥವಾಗಿ ಹಾಗೂ ದಿವಂಗತ ಐತಪ್ಪ ಮಾಸ್ತರ ರವರ ದತ್ತಿ ನಿಧಿಯನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಶಿಕ್ಷಕಿ ದೀಪ್ತಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಗುರುಗಳಾಗಿರುವ ಶ್ರೀಮತಿ ಪ್ರಮೀಳಾರವರು ಸ್ವಾಗತಿಸಿದರು. ಶಿಕ್ಷಕಿ ಆಶಾಲತಾರವರು ವಂದಿಸಿದರು.ಸಹಶಿಕ್ಷಕ ಗೋವಿಂದರಾವ್ ಸಹಕರಿಸಿದರು.