ಬೆಳ್ಳಾರೆ ಕೆ.ಪಿ.ಎಸ್. ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಧ್ವಜಾರೋಹಣವನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ನೆರವೇರಿಸಿದರು. ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಪಿ.ಎನ್. ಭಟ್ ಇವರು ಶುಭಹಾರೈಸಿದರು.

ಎಸ್ ಡಿಎಂಸಿ ಉಪಾಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಸದಸ್ಯರಾದ ವಸಂತ ಉಲ್ಲಾಸ್, ಮಹಮ್ಮದ್ ಆಸಿರ್, ಅಬ್ದುಲ್ ಬಶೀರ್, ಮುರಳಿಕೃಷ್ಣ, ಶರತ್ ಪೂಗವನ, ಪ್ರಭಾರ ಪ್ರಾಂಶುಪಾಲ ವಿಶ್ವನಾಥ ಗೌಡ, ಉಪಪ್ರಾಂಶುಪಾಲರಾದ ಉಮಾಕುಮಾರಿ, ಉಪನ್ಯಾಸಕರು, ಶಿಕ್ಷಕ ವೃಂದ, ಪೋಷಕರು, ಎನ್.ಸಿ.ಸಿ, ಸ್ಕೌಟ್, ಗೈಡ್ಸ್ ಘಟಕ ವಿದ್ಯಾರ್ಥಿಗಳು ಭಾಗವಹಿಸಿದರು.

ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಸಿಹಿತಿಂಡಿ ವ್ಯವಸ್ಥೆಯ ಮಾಡಲಾಯಿತು