ಪೈಚಾರ್ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ವತಿಯಿಂದ ಸ್ವಾತಂತ್ರೋತ್ಸವ ಆಚರಣೆ ಮತ್ತು ಸಾಧಕರಿಗೆ ಸನ್ಮಾನ

0

ಪೈಚಾರು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಂಘದ ಗೌರವಾಧ್ಯಕ್ಷ ಶಾಫೀ ಪ್ರಗತಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಲತೀಫ್ ಟಿ ಎ ವಹಿಸಿದ್ದರು.

ಈ ಸಂದರ್ಭದಲ್ಲಿ ಸಮಿತಿ ವತಿಯಿಂದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.ಸೈನಿಕ ಚಂದ್ರಹಾಸ್ ಕೆ ಆರ್,ಮುಳುಗು ತಜ್ಞರಾದ ಅಬ್ಬಾಸ್ ಶಾಂತಿನಗರ ಹಾಗೂ ಬೊಳುಬೈಲು ಪೀಸ್ ಸ್ಕೂಲ್ ನ ಸ್ಥಾಪಕ ಅಧ್ಯಕ್ಷ ಅಬೂಬಕ್ಕರ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್, ಸಮಿತಿಯ ಕೋಶಾಧಿಕಾರಿ ಬಶೀರ್ ಆರ್ ಬಿ, ಮುಖಂಡರುಗಳಾದ ಶರೀಫ್ ಟಿ,ಎ ಮಧುಸೂದನ್,ಅಶ್ರಫ್ ಪೈಚಾರ್ ಹಾಗೂ ಸುಲೇಮಾನ್ ಮೊದಲಾದವರು ಉಪಸ್ಥಿತರಿದ್ದರು. ಅಬ್ದುಲ್ ರಜ್ಜಾಕ್ ಸ್ವಾಗತಿಸಿ ಬಶೀರ್ ಆರ್ ಬಿ ವಂದಿಸಿದರು.