ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ, ಕೇನ್ಯ ವತಿಯಿಂದ ಸ್ವಾತಂತ್ರ್ಯೋತ್ಸವ

0

ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ, ಕೇನ್ಯ ವತಿಯಿಂದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಬಳ್ಪದ ವಿಕಾಸಪುರ ಎಡೋಣಿಯಲ್ಲಿರುವ ಶಿಶು ಮಂದಿರದಲ್ಲಿ ನಡೆಯಿತು.

ವಿಶ್ರಾಂತ ಮಾಜಿ ಸೈನಿಕರಾದ ಕುಸುಮಾಧರ ಕುಂಬ್ರ ಧ್ವಜಾರೋಹಣಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಮತ್ತು ಮುಂದಿನ ಪೀಳಿಗೆ ಅನುಸರಿಸಬೇಕಾದ ಕಾರ್ಯಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ಸಭೆಯಲ್ಲಿ ಉಪಸ್ಥಿತರಿದ್ದ ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸೂಂತಾರು ಮಾತಾಡಿ ಸ್ವಾತಂತ್ರ್ಯ ನಂತರದ 7 ದಶಕಗಳ ನಂತರವೂ ದೇಶದಲ್ಲಿ ಮಹಿಳಾ ಪೂರ್ಣ ಸ್ವರಾಜ್ಯ ಸಂಪೂರ್ಣವಾಗಿ ಸಾಕಾರಗೊಳ್ಳದಿರುವ ಬಗ್ಗೆ ಖೇದ ವ್ಯಕ್ತಪಡಿಸಿದರು.ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ ಮಾತಾಡಿ ಶಿಶು ಮಂದಿರ, ಬಾಲಗೋಕುಲದಂತಹ ಸಮಾಜ ನಿರ್ಮಾಣ ಸಂಸ್ಥೆ ಗಳು ವ್ಯಕ್ತಿ ಗಳಲ್ಲಿ ಸಂಸ್ಕಾರ, ಸಂಸ್ಕೃತಿ ಮೂಡಿವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಬಳಿಕ ಪ್ರತಿಷ್ಠಾನದ ಸಮಾಜಮುಖಿ ಧ್ಯೇಯಗಳಲ್ಲಿ ಒಂದಾದ ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಬಳಕೆ ಮುಕ್ತ ಗೊಳಿಸಲು ಬಟ್ಟೆ ಚೀಲ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಳ್ಪ ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಪ್ರತಿಷ್ಠಾನದ ಸದಸ್ಯೆ ತಾರ ಬಿ ರೈ ಸ್ವಾಗತಿಸಿದರೆ, ಅರುಣ್ ರೈ ಗೆಜ್ಜೆ ಧನ್ಯವಾದಗೈದರು.

ಪ್ರತಿಷ್ಠಾನದ ಸದಸ್ಯ ರವಿಕುಮಾರ್ ನರಿಯಂಗ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಬಳ್ಪ ಪೇಟೆಯ ಎಲ್ಲಾ ವರ್ತಕರ ಬಳಿ ತೆರಳಿ ಸಾಂಕೇತಿಕವಾಗಿ ತಲಾ 10ಬಟ್ಟೆ ಚೀಲ ಉಚಿತವಾಗಿ ನೀಡಿ ಪ್ಲಾಸ್ಟಿಕ್ ನಿಂದಾಗುವ ಹಾನಿ ಬಗ್ಗೆ ವಿವರಿಸಿ ಬಟ್ಟೆ ಚೀಲಗಳನ್ನೇ ಉಪಯೋಗಿಸಲು ಗ್ರಾಹಕರಿಗೆ ತಮನವರಿಕೆಮಾಡುವಂತೆ ಮಾಹಿತಿ ನೀಡಲಾಯಿತು.

ಸಿಹಿತಿನಿಸು ವಿತರಣೆಯ ಬಳಿಕ ಕಾರ್ಯಕ್ರಮ ಸಮಾರೋಪ ಗೊಂಡಿತು. ಗ್ರಾಮ ವಿಕಾಸ ಪ್ರತಿಷ್ಟಾನ ಬಳ್ಪ ಹಾಗೂ ಗ್ರಾಮ ಪಂಚಾಯತ್ ಬಳ್ಪ ಇದರ ಸಹ ಯೋಗದಲ್ಲಿ ಬಳ್ಪ ಪೇಟೆಯ ಅಂಗಡಿಗಳಿಗೆ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಲು, ಬಟ್ಟೆ ಕೈಚೀಲ ವಿತರಿಸಲಾಯಿತು.