ದರ್ಖಾಸ್ತು : ಬಸ್ ಗೆ ಬೈಕ್ ಡಿಕ್ಕಿ – ಅಪಾಯದಿಂದ ಪಾರು

0

ದರ್ಖಾಸ್ತು ವಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಸುಳ್ಯದಿಂದ ಬೆಳ್ಳಾರೆ ಕಡೆ ಹೋಗುವ ಬಸ್ಸು ದರ್ಖಾಸಿನಲ್ಲಿ ಎದುರುಗಡೆಯಿಂದ ಬರುವ ವಾಹನಕ್ಕೆ ಸೈಡ್ ಕೊಡುವಾಗ ಹಿಂಬದಿಯಿಂದ ಬಂದ ಬೈಕ್ ಬಸ್ಸಿನ ಹಿಂಬದಿಗೆ ಡಿಕ್ಕಿಯಾಯಿತು.

ಪರಿಣಾಮ ಬೈಕ್ ಸವಾರರು ರಸ್ತೆಗೆ ಬಿದ್ದಿದ್ದು ಯಾವುದೇ ಗಾಯಗಳಾಗಲಿಲ್ಲ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಆಗಮಿಸಿರುವುದಾಗಿ ತಿಳಿದು ಬಂದಿದೆ.