ಉಬರಡ್ಕ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಪೂರ್ಣಿಮಾ ಸೂಂತೋಡು ಉಪಾಧ್ಯಕ್ಷೆ ಚಿತ್ರಕುಮಾರಿ ಅಧಿಕಾರ ಸ್ವೀಕಾರ

0

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ಸೂಂತೋಡು , ಹಾಗೂ ಉಪಾಧ್ಯಕ್ಷರಾಗಿ ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಶ್ರೀಮತಿ ಚಿತ್ರಕುಮಾರಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ನೂತನವಾಗಿ ಅಧ್ಯಕ್ಷೆ ಪೂರ್ಣಿಮಾ ಮತ್ತು ಉಪಾಧ್ಯಕೆ ಚಿತ್ರಕುಮಾರಿ ಅವರನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ವಿದ್ಯಾಧರ್ ಅವರು ಸ್ವಾಗತಿಸಿ ಬರಮಾಡಿಕೂಂಡರು. ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪ್ರಶಾಂತ್ ಪಾನತ್ತಿಲ, ಸದಸ್ಯರಾದ ಹರೀಶ್ ಉಬರಡ್ಕ, ಶ್ರೀಮತಿ ಭವಾನಿ ಮೂರ್ಜೆ, ಶ್ರೀಮತಿ ಮಮತಾ ಕುದ್ಪಾಜೆ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.