ಜಟ್ಟಿಪಳ್ಳ: ಕಪಿಲ ಯುವಕ ಮಂಡಲದ ಪದಗ್ರಹಣ

0


ಅಧ್ಯಕ್ಷರಾಗಿ ಹರೀಶ್ ಜೆ.ಬಿ., ಕಾರ್ಯದರ್ಶಿ ಕವಿನ್ ಎಸ್.ಆರ್., ಖಜಾಂಜಿ: ನಿತೇಶ್

ಜಟ್ಟಿಪಳ್ಳ ಕಪಿಲ ಯುವಕ ಮಂಡಲದ ವಾರ್ಷಿಕ ಮಹಾಸಭೆಯು ಆಗಸ್ಟ್ 15ರಂದು ಜಟ್ಟಿಪಳ್ಳದ ಯುವ ಸದನದಲ್ಲಿ ನಡೆಯಿತು. ಪ್ರದೀಪ್ ಜಟ್ಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಕಟ್ಟಡ ಸಮಿತಿಯ ಅಧ್ಯಕ್ಷ ರಘುನಾಥ್ ಜಟ್ಟಿಪಳ್ಳ, ಗೌರವಾಧ್ಯಕ್ಷ ವಿಶುಕುಮಾರ್ ಕೆ.ಎಸ್. ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಪಿನ್ ಜಟ್ಟಿಪಳ್ಳ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.


ಬಳಿಕ 2023 – 24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷರಾಗಿ ಹರೀಶ್ ಜೆ. ಬಿ., ಉಪಾಧ್ಯಕ್ಷರಾಗಿ ವಿಪಿನ್ ಜಟ್ಟಿಪಳ್ಳ, ಕಾರ್ಯದರ್ಶಿಯಾಗಿ ಕವೀನ್ ಎಸ್.ಆರ್., ಜೊತೆ ಕಾರ್ಯದರ್ಶಿಯಾಗಿ ರಿತೇಶ್ ಕಾನತ್ತಿಲ, ಕೋಶಾಧಿಕಾರಿಯಾಗಿ ನಿತೇಶ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಯಾಗಿ ನಿತೇಶ್ ಕಾನತ್ತಿಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮುರಳಿ ಬೊಳಿಯಮಜಲು, ನಿರ್ದೇಶಕರುಗಳಾಗಿ ಪ್ರಸಾದ್ ಜಟ್ಟಿಪಳ್ಳ, ಕಿರಣ್, ಮಂಜುನಾಥ್ ಸಂದೇಶ್ ಕೆ.ಜೆ. ಮತ್ತು ರಾಕೇಶ್ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ವಿಶುಕುಮಾರ್ ಕೆ. ಎಸ್. ರವರನ್ನು ಆಯ್ಕೆ ಮಾಡಲಾಯಿತು. ಕಾನೂನು ಮತ್ತು ಗೌರವ ಸಲಹೆಗಾರರಾಗಿ ಯುವ ನ್ಯಾಯವಾದಿ ತನುದೀಪ್ ಪೆಲ್ತಡ್ಕರವರನ್ನು ನೇಮಿಸಲಾಯಿತು. ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಸಂತೋಷ್ ಕುಮಾರ್ ಶೆಟ್ಟಿ, ಚೇತನ್ ಜಟ್ಟಿಪಳ್ಳ, ಜೀವನ್ ಕೋಲ್ಚಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಪಿನ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.