ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆ ಆ.19 ರಂದು ಮಂಗಳೂರಿನಲ್ಲಿ ನಡೆದಿದ್ದು ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸೇವೆಯನ್ನು ಪರಿಗಣಿಸಿ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಿದೆ. ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿದರು.















ಮಡಪ್ಪಾಡಿ ಪ್ರಾ. ಕೃ. ಪ. ಸಹಕಾರ ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾದ ಮಿತ್ರದೇವ ಮಡಪ್ಪಾಡಿ, ನಿರ್ದೇಶಕರಾದ ಸೋಮಶೇಖರ ಕೇವಳ, ಅಜಯ್ ವಾಲ್ತಾಜೆ, ರಾಜಕುಮಾರ ಪೂಂಬಾಡಿ, ಪ್ರವೀಣಾ ಯತೀಂದ್ರನಾಥ ಪಾಲ್ತಾಡು, ತಾರಾ ಜೆ.ಸಿ., ಕುಂಞಕ್ಕ ಸಿ.ಹೆಚ್., ಹಾಗೂ ಸದಸ್ಯರು, ಟಿ.ಎ.ಪಿ.ಸಿ.ಎಂ.ಎಸ್.ನ ಅಧ್ಯಕ್ಷರು ಆದ ನಿತ್ಯಾನಂದ ಮುಂಡೋಡಿ ಉಪಸ್ಥಿತರಿದ್ದರು.









