ಬೆಳ್ಳಾರೆ : ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಶತಾಯುಷಿ ರಾಮಣ್ಣ ಗೌಡ ಪೂಜಾರಿ ಮನೆಯವರಿಗೆ ಸನ್ಮಾನ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಹಿರಿಯರ ದಿನಾಚರಣೆ ಪ್ರಯುಕ್ತ ಶತಾಯುಷಿ ರಾಮಣ್ಣ ಗೌಡ ಪೂಜಾರಿಮನೆಯವರನ್ನು ಅವರ ಮನೆಯಲ್ಲಿ ಆ.21 ರಂದು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ರೊ.ಶ್ಯಾಮ್ ಸುಂದರ ರೈಯವರು ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿ ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ಹಿರಿಯರ ದಿನಾಚರಣೆ ಪ್ರಯುಕ್ತ 103 ವರ್ಷ ತುಂಬಿರುವ ಶತಾಯುಷಿ ರಾಮಣ್ಣ ಗೌಡ ಪೂಜಾರಿಮನೆಯವನ್ನು ಸನ್ಮಾನಿಸುತ್ತಿದ್ದೇವೆ.ಇವರು ಚೊಕ್ಕಾಡಿ ಶ್ರೀ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿದವರು. ಪ್ರಗತಿಪರ ಕೃಷಿಕರಾಗಿಯೂ ಬಹಳಷ್ಟು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರೊ.ಶಶಿಧರ ಬಿ.ಕೆ, ರೊ.ಎ.ಕೆ.ಮಣಿಯಾಣಿ, ರೊ.ರವೀಂದ್ರ ಗೌಡ ಮರಕ್ಕಡ,ರೊ.ಪದ್ಮನಾಭ ಬೀಡು,ರೊ.ರೊ.ಹರ್ಷಿತ್ ಗೆಜ್ಜೆ ,ಮನೆಯವರಾದ ಮಾಧವ ಗೌಡ ಪೂಜಾರಿಮನೆ, ಅನಿಲ್ ಪೂಜಾರಿಮನೆ, ಶ್ರೀಮತಿ ಸನ್ನಿಧಿ ಪೂಜಾರಿಮನೆ ಉಪಸ್ಥಿತರಿದ್ದರು.
ರೊ.ಆರಿಫ್ ಬೆಳ್ಳಾರೆ ವಂದಿಸಿದರು.