ಸುಳ್ಯ ಸೈಂಟ್ ಜೋಸೆಫ್ ಶಾಲಾ ಸ್ಕೌಟ್ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

0

ಜಿಲ್ಲಾ ಸ್ಕೌಟ್ ಭವನ ಲಾಲ್ ಬಾಗ್ , ಮಂಗಳೂರು ಇಲ್ಲಿ ಸೆ.01 ರಂದು ನಡೆದ ಜಿಲ್ಲಾಮಟ್ಟದ ದೇಶಭಕ್ತಿ ಗೀತೆ ಗೀತ ಗಾಯನ ಸ್ಪರ್ಧೆಯಲ್ಲಿ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ವಿಭಾಗದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಮೌರ್ಯ ಸಿ.ಬಿ. , ಅಶ್ವಿಜ್ ಅತ್ರೇಯ, ತನ್ಮಯ್ ಸೋಮಯಾಗಿ , ಲಕ್ಷ್ಯಜಿತ್ ರೈ , ಚಂದನ್ ಎಂ ಎಸ್ , ಬಿಪಿನ್ ಕುಮಾರ್ , ದಿವಿಜ್. ಯು , ಹಾರ್ದಿಕ್ ಪಿ ರವರು ಭಾಗವಹಿಸಿ ಪ್ರಥಮ ಸ್ಥಾನವನ್ನು ಗಳಿಸುವುದರೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶಾಲಾ ಸಂಚಾಲಕರಾದ ಫಾದರ್ ವಂದನೀಯ ವಿಕ್ಟರ್ ಡಿಸೋಜಾ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮಾರವರು ಹಾಗೂ ಶಿಕ್ಷಕ ವೃಂದದವರು ಶುಭ ಹಾರೈಸಿದರು. ವಿದ್ಯಾರ್ಥಿಗಳಿಗೆ ಸ್ಕೌಟ್ ಶಿಕ್ಷಕರಾದ ಭಾನುಪ್ರಕಾಶ್ ಅರಂತೋಡು ಇವರು ತರಬೇತಿಯನ್ನು ನೀಡಿರುತ್ತಾರೆ.