ಕೆಎನ್‌ಎಸ್ಎಸ್ ಸುಳ್ಯ ಕರಯೋಗಂ ವತಿಯಿಂದ ಓಣಂ ಆಚರಣೆ, ಕುಟುಂಬ ಸಮ್ಮಿಲನ

0

ಭಾರ್ಗವಿ ನಾಯರ್ ಅವರಿಗೆ ಗೌರವಾರ್ಪಣೆ; ರಂಜಿಸಿದ ಸಾಂಸ್ಕೃತಿಕ ಸಂಭ್ರಮ

ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ (ಕೆಎನ್‌ಎಸ್‌ಎಸ್‌) ಸುಳ್ಯ ಕರಯೋಗಂ ವತಿಯಿಂದ ಓಣಂ ಆಚರಣೆ, ಕುಟುಂಬ ಸಮ್ಮಿಲನ ಹಾಗೂ ಸಾಂಸ್ಕೃತಿಕ ಸಂಭ್ರಮ ಇಂದು ಸುಳ್ಯ ಲಯನ್ಸ್‌ ಸಭಾಂಗಣದಲ್ಲಿ ನಡೆಯಿತು. ಕೆಎನ್‌ಎಸ್‌ಎಸ್‌ ಉಪಾಧ್ಯಕ್ಷ ಪಿ.ಕೆ.ಎಸ್.ಪಿಳ್ಳೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಯರ್ ಸಮುದಾಯದವರು ಜಗತ್ತಿನ ಎಲ್ಲೇ ಇದ್ದರೂ ತಮ್ಮ ಆಚಾರ, ವಿಚಾರ, ಸಂಸ್ಕಾರಗಳನ್ನು ಬಿಟ್ಟು ಕೊಡುವುದಿಲ್ಲ ಎನ್ನುವುದಕ್ಕೆ ಸುಳ್ಯದ ಆಚರಣೆಯೇ ಸಾಕ್ಷಿ ಎಂದರು.

ಕೆಎನ್‌ಎಸ್ಎಸ್ ಸುಳ್ಯ ಕರಯೋಗಂ ಅಧ್ಯಕ್ಷ ಭಾಸ್ಕರನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು.ಫೆಡರಲ್ ಬ್ಯಾಂಕ್ ನ ಸುಳ್ಯ ಆ ಶಾಖೆಯ ಹಿರಿಯ ವ್ಯವಸ್ಥಾಪಕರಾದ ನಿತಿನ್ ಗಂಗಾಧರನ್ ನಂಬಿಯಾರ್, ಮಂಗಳೂರು ಕರಯೋಗಂ ಮಾಜಿ ಅಧ್ಯಕ್ಷ ಮುರಳಿ ಹೊಸಮಜಲು ಅತಿಥಿಗಳಾಗಿ ಭಾಗವಹಿಸಿದ್ದರು.

‘ಓಣಂ ಅಂದು ಇಂದು’ ಕುರಿತಾಗಿ ಕರಯೋಗಂ ಮಾಜಿ ಕಾರ್ಯದರ್ಶಿ ಚಂದ್ರಮೋಹನ್ ಮಾತನಾಡಿ ಓಣಂ‌ ಆಚರಣೆಯ ವೈವಿಧ್ಯತೆಯನ್ನು ಅನಾವರಣಗೊಳಿಸಿದರು.

ಕರಯೋಗಂ ಮೂಲಕ ಸ್ಕಾಲರ್ ಶಿಪ್ ಗಾಗಿ 50 ಸಾವಿರ ದತ್ತಿನಿಧಿ ಸ್ಥಾಪಿಸಿದ ಶ್ರೀಮತಿ ಭಾರ್ಗವಿ ಕುಮಾರ ನಾಯರ್ ಕುಟುಂಬದ ಪರವಾಗಿ ಭಾರ್ಗವಿಯವರನ್ನು‌ ಈ ಸಂದರ್ಭದಲ್ಲಿ‌ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ದತ್ತಿ ನಿಧಿ ಸ್ಥಾಪಕರಾದ ಗೋಪಾಲ ನಾಯರ್ ಭಸ್ಮಡ್ಕ, ಪದ್ಮನಾಭನ್ ನಾಯರ್ ಮಧುವನ, ಗಣೇಶ್ ಪ್ರಸಾದ್ ಸುಬ್ರಹ್ಮಣ್ಯ ವಿದ್ಯಾರ್ಥಿ ವೇತನ ವಿತರಿಸಿದರು.

ಕು.ಶ್ರೀಲಯ ಪ್ರಾರ್ಥಿಸಿದರು. ಕರಯೋಗಂ ಸದಸ್ಯ ಪ್ರಮೋದ್ ಕುಮಾರ್ ಸ್ವಾಗತಿಸಿದರು. ಕರಯೋಗಂ ಕಾರ್ಯದರ್ಶಿ ಬಾಲಕೃಷ್ಣನ್ ನಾಯ‌ರ್ ಎಸ್‌ಬಿ ಲ್ಯಾಬ್‌ ವರದಿ ವಾಚಿಸಿದರು., ಕೋಶಾಧಿಕಾರಿ ಕೆ.ಪ್ರಭಾಕರನ್ ನಾಯ‌ರ್ ಸ್ವಾಗತ್ ಆಯವ್ಯಯ ಮಂಡಿಸಿದರು. ಸೃಜನ್ ಕೃಷ್ಣ, ಡಾ. ಸುಬಿನ್ ಕೃಷ್ಣ ಅತಿಥಿಗಳನ್ನು ಪರಿಚಯಿಸಿದರು.

ವಿಶ್ವನಾಥನ್ ನಾಯರ್ ವಂದಿಸಿದರು. ಶ್ರೀಮತಿ ಅರುಣಾ ಪ್ರಮೋದ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ದುರ್ಗಾಕುಮಾರ್ ನಾಯರ್ ಕೆರೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶ್ರೀಕಲಾ ಬಾಲಕೃಷ್ಣನ್, ಶ್ರೀಮತಿ ಅಂಬಿಕಾ ಚಂದ್ರಶೇಖರ್, ಶ್ರೀಮತಿ ವೀಣಾ ಪ್ರಭಾಕರ್, ಸಿ.ಎಚ್.ಪ್ರಭಾಕರನ್ ನಾಯರ್ ಸ್ವಾಗತಿಸಿದರು.ಓಣಂ ಆಚರಣೆ ಪ್ರಯುಕ್ತ ಆಕರ್ಷಕ ಪೂಕಳಂ ರಚಿಸಲಾಗಿತ್ತು. ಓಣಂ ಸದ್ಯ ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಓಣಂ ಆಚರಣೆಯ ಮೆರುಗು ನೀಡಿತು.