ಪಡ್ಪಿನಂಗಡಿ:ಹಾಲಿನ ಟ್ಯಾಂಕರ್ ಪಲ್ಟಿ

0

ಹಾಲು ಸಾಗಾಟದ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಗಾಯ ಗೊಂಡ ಘಟನೆ ಪಡ್ಪಿನಂಗಡಿ ಯಿಂದ ಸೆ.10ರಂದು ವರದಿಯಾಗಿದೆ.

ಎಡಮಂಗಲ, ಏನೆಕಲ್ಲು,ಪಂಜ ಬಿ.ಎಂ.ಸಿ ಗಳಿಂದ ಹಾಲು ಶೇಖರಿಸಿ ಸಾಗಾಟ ಮಾಡುತ್ತಿದ್ದ ನಂದಿನಿ ಹಾಲಿನ ಟ್ಯಾಂಕರ್ ಸುಬ್ರಹ್ಮಣ್ಯ -ಮಂಜೇಶ್ವರ ರಾಜ್ಯ ಹೆದ್ದಾರಿಯ ಪಡ್ಪಿನಂಗಡಿಯಲ್ಲಿ ನಿಯಂತ್ರಣ ತಪ್ಪಿ
ಚರಂಡಿಗೆ ಉರುಳಿದ್ದು, ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದೆ.,ಟ್ಯಾಂಕರಿನಲ್ಲಿರುವ
ಹಾಲು ಸುರಿಕ್ಷಿತವಾಗಿರುವುದಾಗಿ ತಿಳಿದು ಬಂದಿದೆ.