ಕುಟುಂಬಸ್ಥರ ಕೈಹಿಡಿದು ಸಾಂತ್ವಾನ ಹೇಳಿದ ಚೌಟ
ಗಾಯಾಳು ಶೇಷಪ್ಪ ಗೌಡರ ಪುತ್ರ ಅವಿನ್ ಮನೆಗೂ ಭೇಟಿ
ಸ್ಥಳೀಯ ಬಿಜೆಪಿ ನಾಯಕರುಗಳ ಉಪಸ್ಥಿತಿ
ಅರಂತೋಡು ಗ್ರಾಮ ಪಂಚಾಯತಿ ಸದಸ್ಯ ಹಾಗೂ ಬಿಜೆಪಿ ಕಾರ್ಯಕರ್ತ ಗಂಗಾಧರ ಬನ ಹಾಗೂ ಶೇಷಪ್ಪ ಗೌಡರ ಅವರ ಮನೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರು ಎ.28ರಂದು ಅಪರಾಹ್ನ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.















ಗಂಗಾಧರ ಬನ ಅವರ ಪುತ್ರ ದರ್ಶನ್ ಬಿ.ಜಿ. ಅವರು ಮತದಾನ ಮಾಡಲು ಮೈಸೂರಿನಿಂದ ಆಗಮಿಸುತ್ತಿದ್ದ ವೇಳೆ ಸಂಪಾಜೆಯ ದೊಡ್ಡಡ್ಕ ಎಂಬಲ್ಲಿ ಬೈಕ್ ಅಪಘಾತವಾಗಿ ದರ್ಶನ್ ಮೃತಪಟ್ಟಿದ್ದರು.

ಜೊತೆಗೆ ಶೇಷಪ್ಪ ಗೌಡ ಬನ ಅವರ ಮನೆಗೂ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಕ್ಯಾಪ್ಟನ್ ಬ್ರಿಜೇಶ್ ಚೌಟರು ಮಾತನಾಡಿದರು.
ಶೇಷಪ್ಪ ಗೌಡರ ಪುತ್ರ ಅವಿನ್ ಅವರು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ನಾಯಕರುಗಳಾದ ಸಂತೋಷ್ ಕುತ್ತಮೊಟ್ಟೆ, ಕೇಶವ ಅಡ್ತಲೆ, ದಯಾನಂದ ಕುರುಂಜಿ, ಶಿವಾನಂದ ಕುಕ್ಕುಂಬಳ , ಶಂಕರಲಿಂಗಂ, ತೀರ್ಥರಾಮ ಅಡ್ಕಬಳೆ, ಕುಸುಮಾಧರ ಅಡ್ಕಬಳೆ, ಭಾರತಿ ಪುರುಷೋತ್ತಮ ಉಳುವಾರು, ಸೇರಿದಂತೆ ಮತ್ತಿತರ ಸ್ಥಳೀಯ ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು.










