ಸುಳ್ಯ: ಕೆವಿಜಿ ಪಾಲಿಟೆಕ್ನಿಕ್ ನಿವೃತ್ತ ಉಪನ್ಯಾಸಕ ಶೀನಪ್ಪ ಗೌಡ ನಿಧ‌ನ

0

ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ನಿವೃತ್ತ ಉಪನ್ಯಾಸಕ ಪುತ್ತೂರಿನ ತೆಂಕಿಲ ನಿವಾಸಿ ಶೀನಪ್ಪ ಗೌಡ ಅಸೌಖ್ಯದಿಂದ ಮೇ. 5ರಂದು ನಿಧನರಾದರು. ಇವರಿಗೆ 64 ವರ್ಷ ವಯಸ್ಸಾಗಿತ್ತು.
ಕೆವಿಜಿ ಪಾಲಿಟೆಕ್ನಿಕ್ ನ ಆಟೋಮೊಬೈಲ್ ವಿಭಾಗದಲ್ಲಿ ಸಂಸ್ಥೆಯ ಆರಂಭದಿಂದಲೇ ಸೇವೆ ಸಲ್ಲಿಸಿಕೊಂಡು ಬಂದ ಶೀನಪ್ಪ ಗೌಡರು 2020ರ ಜುಲೈಯಲ್ಲಿ ನಿವೃತ್ತಿ ಹೊಂದಿದ್ದರು. ಮೃತರ ಪತ್ನಿ ಎಲ್.ಐ.ಸಿ. ಉದ್ಯೋಗಿ, ಪುತ್ತೂರು ಒಕ್ಕಳಿಗ ಗೌಡ ಮಹಿಳಾ ಸಂಘದ ಮಾಜಿ ಕಾರ್ಯದರ್ಶಿ ಶ್ರೀಮತಿ ಗೀತಾ, ಪುತ್ರಿಯರಾದ ಶ್ರೀಮತಿ ಪ್ರಜ್ಞಾ ಮುರಳೀಧರ ತಂಟೆಪ್ಪಾಡಿ, ಬೆಂಗಳೂರಿನಲ್ಲಿ ಎಂ.ಬಿ.ಎ. ಓದುತ್ತಿರುವ ಕು. ಪ್ರತಿಜ್ಞಾ ಸೇರಿದಂತೆ ನಾಲ್ವರು ಸಹೋದರರು, ಇಬ್ಬರು ಸಹೋದರಿಯರು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.