ಮೇ.14-15 : ಕಲ್ಲಪಳ್ಳಿ ಕೂಟುಪಿಲಾವು ವಿಷ್ಣುಮೂರ್ತಿ ಸೇವಾ ಸಂಘದ ವತಿಯಿಂದ ವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಆಲೆಟ್ಟಿ ಗ್ರಾಮದ ಗಡಿ ಪ್ರದೇಶ ಕಲ್ಲಪಳ್ಳಿಯ ಕೂಟುಪಿಲಾವು ಶ್ರೀ ವಿಷ್ಣುಮೂರ್ತಿ ಸೇವಾ ಸಂಘದ ವತಿಯಿಂದ ವರ್ಷಂಪ್ರತಿ ಜರುಗುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮೇ.14 ಮತ್ತು 15 ರಂದು ನಡೆಯಲಿರುವುದು.

ಮೇ.14 ರಂದು ಬೆಳಗ್ಗೆ ಉಗ್ರಾಣ ತುಂಬುವುದು, ರಾತ್ರಿ ದೈವದ ಭಂಡಾರ ಆಗಮಿಸಿ ಮೆಲೇರಿಗೆ ಅಗ್ನಿ ಸ್ಪರ್ಶದ ಬಳಿಕ ಶ್ರೀ ದೈವದ ಕುಲ್ಚಾಟವು ನಡೆಯಲಿದೆ. ಮರುದಿನ ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶವಾಗಿ ಮಾರಿಕಳ ಪ್ರವೇಶದ ನಂತರ ಪ್ರಸಾದ ವಿತರಣೆಯಾಗಲಿರುವುದು.ಮಧ್ಯಾಹ್ನ ಆಗಮಿಸಿದ ಎಲ್ಲರಿಗೂ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಲಿರುವುದು ಎಂದು ಸಂಘದ ಅಧ್ಯಕ್ಷ ಬಾಲಚಂದ್ರ ಪಿ.ಕೆ ಯವರು ತಿಳಿಸಿದರು.