ಬೆಳ್ಳಾರೆ ಡಾ.ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ವಾರದ ಸರ್ಟಿಫಿಕೆಟ್ ಕೋರ್ಸ್

0


ಡಾ.ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇದರ ಆಂತರಿಕ ಭರವಸಾ ಗುಣಮಟ್ಟ ಕೋಶ, ಉದ್ಯೋಗ ಮಾಹಿತಿ ಕೋಶ ಮತ್ತು ಮಹಿಳಾ ಕೋಶದ ಆಶ್ರಯದಲ್ಲಿ ಕಾಲೇಜಿನ ಅಂತಿಮ ಪದವಿಯ ವಿದ್ಯಾರ್ಥಿನಿಯರಿಗೆ ಮಹಿಂದ್ರ ಅಂಡ್ ಮಹೀಂದ್ರ ಕಂಪನಿಯ ಪ್ರಾಯೋಜಕತ್ವದಲ್ಲಿ “Pride Class room”ಎಂಬ ಶೀರ್ಷಿಕೆಯಡಿಯಲ್ಲಿ ಒಂದು ವಾರದ ಸರ್ಟಿಫಿಕೆಟ್ ಕೋರ್ಸ್ ನಡೆಯಿತು.

ಕಾರ್ಯಕ್ರಮದಲ್ಲಿ ಮಹಿಂದ್ರ ಕಂಪನಿಯ ಸಂಪನ್ಮೂಲ ವ್ಯಕ್ತಿಯಾಗಿ ಮೇಘನಾರವರು ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದರು ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ದಾಮೋದರ ಕಣಜಾಲು ಇವರ ನೇತೃತ್ವದಲ್ಲಿ ಉದ್ಯೋಗ ಮಾಹಿತಿ ಕೋಶದ ಸಂಚಾಲಕರಾದ ಡಾ.ರಾಮಚಂದ್ರ ಕೆ ಹಾಗೂ ಮಹಿಳಾ ಕೋಶದ ಸಂಚಾಲಕಿ ಶ್ರೀಮತಿ ಸುನೀತಾ ನಾಯ್ಕ ರವರು ಕಾರ್ಯಕ್ರಮವನ್ನು ಸಂಘಟಿಸಿದರು.